ಮನಸೋತೆನು ಆ ಯೋಧನಿಗೆ
ಅವನೂ ಮನಸೋತ
ಚೆಲುವ ಚೆನ್ನಿಗ ಉದ್ಯಾನದಲಿ
ಕಲ್ಲ ಮೇಲೆ ಕೂತ
ಹೂವನು ಕೊಟ್ಟು ಕೇಳಿದ ಸುಂದರಿ
ನಿನ್ನ ಹೆಸರು ಏನು?
ಹೇಳಿದೆಯಾದರೆ ಎದೆಯೊಳಗಿಟ್ಟು
ಪೂಜಿಸುವೆನು ನಾನು
ಹಿಂದೆ ಮುಂದೆ ನೋಡದೆ ನನ್ನ
ಹೆಸರು ಕೊಟ್ಟುಬಿಟ್ಟೆ
ನನ್ನ ಮನಸನೂ ಅದರ ಕನಸನೂ
ಹೆಸರ ಜೊತೆಗೆ ಇಟ್ಟೆ
ಕುದುರೆಯನೇರಿ ಹೋದನು ಆತ
ಪತ್ತೆಯಿಲ್ಲ ಮತ್ತೆ
ಹುಂಬ ಗಂಡಸಿಗೆ ಹೆಣ್ಣಿನ ಪ್ರೀತಿಯ
ಆಳ ಅಗಲ ಗೊತ್ತೆ?
ಆಕಾಶದಲಿ ತೇಲುತ್ತಿರುವವು
ಹರಿದ ಎಷ್ಟೊ ಚಿತ್ರ
ಇನ್ನೂ ನನ್ನಲಿ ಬಣ್ಣಗಳಿರುವವು
ಕಾಯುತಿರುವೆ ಮಿತ್ರ
- ಚಿಂತಾಮಣಿ ಕೊಡ್ಲೆಕೆರೆ
4 thoughts on “ಮನಸೋತೆನು ಆ ಯೋಧನಿಗೆ”
ಎಕ್ಕುಂಡಿಯ ಯೋಧ ನೆನಪಿಗೆ ಬಂದ.
ಚೆನ್ನಾಗಿದೆ.
Very nice.
ತುಂಬ ಸೊಗಸಾಗಿದೆ ಮತ್ತು ಅರ್ಥಗರ್ಭಿತವಾಗಿದೆ ಸಹ. ಧನ್ಯವಾದಗಳು ಮತ್ತೊಮ್ಮೆ ನಿಮ್ಮ ಈ ಸುಂದರವಾದ ಕವನಕ್ಕೆ.
ನವಿರಾದ ಕವನ. ಭಾವತರಂಗಗಳನ್ನೆಬ್ಬಿಸಲು ಸಮರ್ಥ.