ಮುಂಬೈ, ನ. 1 : ಮುಂಬೈ ವಿಶ್ವವಿದ್ಯಾಲಯವು ಕಳೆದ ಜುಲೈ ತಿಂಗಳಲ್ಲಿ ನಡೆಸಿದ ಎಂ.ಎ. ಅಂತಿಮ ವರ್ಷದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕನ್ನಡ ವಿಭಾಗದ ವಿದ್ಯಾರ್ಥಿ ವಿದ್ಯಾ ರಾಮಕೃಷ್ಣ ಅವರು ಸರ್ವಾಧಿಕ ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ನೂತನ ಪಠ್ಯ ಕ್ರಮದಂತೆ ವಿದ್ಯಾ ಅವರು ವಿಭಾಗದ ಮುಖ್ಯಸ್ಥರಾದ ಪ್ರೊ.ಜಿ.ಎನ್.ಉಪಾಧ್ಯ ಅವರ ಮಾರ್ಗದರ್ಶನದಲ್ಲಿ “ಶಿವರಾಮ ಕಾರಂತರ ಪ್ರಬಂಧಗಳು – ಒಂದು ಅಧ್ಯಯನ” ಹಾಗೂ “ಕುವೆಂಪು ಮತ್ತು ಕಾರಂತರ ಆತ್ಮಕಥೆಗಳು – ಒಂದು ಅಧ್ಯಯನ” ಎಂಬ ಎರಡು ಶೋಧ ಸಂಪ್ರಬಂಧಗಳನ್ನುಸಿದ್ಧಪಡಿಸಿ ಮುಂಬೈ ವಿಶ್ವವಿದ್ಯಾಲಯಕ್ಕೆ ಸಾದರ ಪಡೆಸಿರುತ್ತಾರೆ. ಅವರು ಖ್ಯಾತ ಸಾಹಿತಿ ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನದಿಂದ ಕೊಡಮಾಡುವ ‘ವ್ಯಾಸರಾಯ ಬಲ್ಲಾಳ ಶ್ರೇಷ್ಠ ವಿದ್ಯಾರ್ಥಿ’ ಪುರಸ್ಕಾರಕ್ಕೂ ಭಾಜನರಾಗಿದ್ದರು.
ಮೂಲತಃ ಚಿತ್ರದುರ್ಗದವರಾದ ವಿದ್ಯಾ ಅವರು ಕುವೆಂಪು ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಷಯದಲ್ಲಿ ತಾಂತ್ರಿಕ ಪದವಿ ಪಡೆದು ಸುಮಾರು ಎರಡು ದಶಕಗಳ ಕಾಲ ಐ.ಟಿ. ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಕೆಲಕಾಲ ಅಮೆರಿಕ ಹಾಗೂ ಬೆಂಗಳೂರುಗಳಲ್ಲಿ ವಾಸಿಸಿರುವ ಅವರು ಕಳೆದ ಹದಿನೆಂಟು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಅಭಿರುಚಿ ಹೊಂದಿರುವ ಅವರ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಅವರು ಅನುವಾದಿಸಿರುವ ಇಂಗ್ಲಿಷ್ ಕೃತಿಯೊಂದು ಕನ್ನಡ ವಿಭಾಗದ ಮೂಲಕ ಬೆಳಕು ಕಂಡಿದೆ.
ವಿದ್ಯಾ ರಾಮಕೃಷ್ಣ ಅವರು ಮುಂಬೈ ವಿಶ್ವವಿದ್ಯಾಲಯ ಕೊಡಮಾಡುವ ಎಂ.ಬಿ.ಕುಕ್ಯಾನ್ ಬಂಗಾರದ ಪದಕಕ್ಕೂ ಅರ್ಹತೆ ಪಡೆದಿದ್ದಾರೆ ಎಂದು ವಿಭಾಗದ ಪ್ರಕಟಣೆ ತಿಳಿಸಿದೆ.
1 thought on “ಮುಂಬೈ ವಿ ವಿ ಕನ್ನಡ ಎಂ.ಎ. ಫಲಿತಾಂಶ ಪ್ರಕಟ: ವಿದ್ಯಾ ರಾಮಕೃಷ್ಣ ಪ್ರಥಮ”
ಅಭಿನಂದನೆಗಳು @ವಿದ್ಯಾ ರಾಮಕೃಷ್ಣ ಅವರೇ 💐💐👏👏🙏🙏@ಹಾಗೂ ಪ್ರೋತ್ಸಾಹ ನೀಡಿ ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಉತ್ತಮ ಗುರುವೃಂದ, ಕನ್ನಡ ವಿಭಾಗ, ಮುಂಬೈ ವಿದ್ಯಾಲಯ, ಕಲಿನ, ಮುಂಬೈ… ಶರಣು 🥰🙏🙏🙏🙏