ಕತಾರ್: ಭಾರತೀಯ ಸ್ವಾತಂತ್ರ್ಯೋತ್ಸವ

ಕತಾರ್, ಆ 15: ಭಾರತೀಯ ಸಾಂಸ್ಕೃತಿಕ ಕೇಂದ್ರದ ಆವರಣದಲ್ಲಿ ಗುರುವಾರ ಮುಂಜಾನೆ ಏಳು ಗಂಟೆಗೆ ಗೌರವಾನ್ವಿತ ಭಾರತೀಯ ರಾಯಭಾರಿಗಳಾದ ಶ್ರೀ ವಿಪುಲ್ ಅವರು ಆಗಮಿಸಿ ಸುಮಾರು 300ಕ್ಕೂ ಹೆಚ್ಚು ಭಾರತೀಯರ ಸಮ್ಮುಖದಲ್ಲಿ ಭಾರತೀಯ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು.

ಉಪಸ್ಥಿತ ಗಣ್ಯರಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಆಡಳಿತ ಸಮಿತಿಯ ಸದಸ್ಯರು ಭಾರತೀಯ ಸಮುದಾಯ ಹಿತೈಷಿ ವೇದಿಕೆ ಆಡಳಿತ ಸಮಿತಿಯ ಸದಸ್ಯರು ಭಾರತೀಯ ಸಮುದಾಯದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಧ್ವಜಾರೋಹಣದ ನಂತರ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕಾ ಸಭಾಂಗಣದಲ್ಲಿ ಘನವೆತ್ತ ಭಾರತೀಯ ರಾಯಭಾರಿಗಳಾದ ಶ್ರೀ ವಿಪುಲ್ ಅವರು ಭಾರತೀಯ ರಾಷ್ಟ್ರಪತಿಗಳ ಸಂದೇಶವನ್ನು ಸಭಿಕರಿಗೆ ಸಭಿಕರಿಗೆ ರವಾನಿಸಿದರು.

ನಂತರ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಶ್ರೀ ಮಣಿಕಂಠನ್ ಅವರು ತಮ್ಮ ಭಾಷಣವನ್ನು ನೀಡಿದರು. ರಾಷ್ಟ್ರಭಕ್ತಿ ಹಾಗೂ ದೇಶಾಭಿಮಾನವನ್ನು ಪ್ರತಿಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಾಲಾ ಮಕ್ಕಳು ಹಾಗೂ ಕಲಾವಿದರು ಸೇರಿ ನೀಡಿದರು.

ಕಾರ್ಯಕ್ರಮದ ಆಯೋಜನೆಯಲ್ಲಿ ಹಲವಾರು ಸೇವಾಕರ್ತರು ಹಾಗೂ ಸ್ವಯಂ ಸ್ವಯಂಸೇವಕರು ತಮ್ಮ ಅಮೂಲ್ಯವಾದ ಸಮಯ ಹಾಗೂ ಪರಿಶ್ರಮದಿಂದ ಸಫಲಗೊಳಿಸಲು ಸಹಾಯವಾಯಿತು. ಇದರಲ್ಲಿ ಪ್ರಮುಖವಾಗಿ ಕರ್ನಾಟಕ ಮೂಲದ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಭಾರತೀಯ ರಾಯಭಾರಿ ಕಾರ್ಯಾಲಯದ ಅಧಿಕಾರಿಗಳ ಸಹಯೋಗದಿಂದ ಹಾಗೂ ಭಾರತೀಯ ಮೂಲದ ಸಹೋದರ ಸಂಘ ಸಂಸ್ಥೆಗಳ ಸಹಕಾರದಿಂದ ಕಾರ್ಯಕ್ರಮವು ಸುಸೂತ್ರವಾಗಿ ಸಂಪನ್ನಗೊಳ್ಳಲು ಸಾಧ್ಯವಾಯಿತು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter