ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯು ಕನ್ನಡದ ಕೆಲವು ಉತ್ಸಾಹಿ ಪ್ರಕಾಶಕರ ನೆರವಿನೊಂದಿಗೆ ಕನ್ನಡದಲ್ಲಿ ಜನಪ್ರಿಯ ವೈಜ್ಞಾನಿಕ ಕೃತಿಗಳನ್ನು ಬರೆಯಬಲ್ಲ ಉದಯೋನ್ಮುಖ ಬರಹಗಾರರ ಕೃತಿಗಳನ್ನು ಪ್ರಕಟಿಸುವ ಯೋಜನೆ ಹಾಕಿಕೊಂಡಿದೆ. ವಿಜ್ಞಾನದಲ್ಲಿ ಪದವಿ ಪಡೆದ ಮತ್ತು ಇತ್ತೀಚೆಗೆ ಬರೆಯಲಾರಂಭಿಸಿರುವ ಯುವ ಮತ್ತು ಮಧ್ಯವಯಸ್ಕ ಬರಹಗಾರರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಆಯ್ಕೆಯಾದ ಪುಸ್ತಕಗಳು 2025ರ ಆರಂಭದಲ್ಲಿ ಪ್ರಕಟವಾಗಲಿವೆ.
ನಿಯಮಗಳು:
1) ವಿಜ್ಞಾನದ ಯಾವುದೇ ಪ್ರಕಾರದಲ್ಲಿ ಲೇಖನ, ಪ್ರಬಂಧ ಮತ್ತು ಕಥೆಗಳನ್ನು ಬರೆಯಬಹುದು.
2) ಬರಹಗಳು ಸಾಮಾನ್ಯ ಓದುಗರಿಗೆ ಅರ್ಥವಾಗುವಂತೆ ಸರಳ ಮತ್ತು ಜನಪ್ರಿಯ ಶೈಲಿಯಲ್ಲಿರಬೇಕು.
3) ಸ್ವತಂತ್ರ, ಅನುವಾದ, ಅನುಸೃಷ್ಟಿ ಮತ್ತು ರೂಪಾಂತರ ಮಾಡಿದ ಗುಣಮಟ್ಟದ ಲೇಖನಗಳಿಗೂ ಅವಕಾಶವಿದೆ.
4) ಕೃತಿಯಲ್ಲಿ ಕನಿಷ್ಠ 20 ಲೇಖನಗಳು, ಗರಿಷ್ಠ 30 ಲೇಖನಗಳಿರಬೇಕು.
5) ಕೃತಿಯಲ್ಲಿ ಕನಿಷ್ಠ 25000, ಗರಿಷ್ಠ 35000 ಪದಗಳಿರಬೇಕು.
6) ತಪ್ಪಿಲ್ಲದಂತೆ ಟೈಪಿಸಿದ ಸಾಫ್ಟ್ ಕಾಪಿಯನ್ನು ಕಳಿಸಬೇಕು. ಕೈ ಬರಹದ ಹಸ್ತಪ್ರತಿ ಸ್ವೀಕರಿಸಲಾಗುವುದಿಲ್ಲ.
7) ಒಬ್ಬ ಬರಹಗಾರರು ಒಂದು ಕೃತಿಯನ್ನು ಮಾತ್ರ ಕಳಿಸಬಹುದು.
8) ಸ್ಪರ್ಧೆಗೆ ಮುಕ್ತ ಪ್ರವೇಶವಿದ್ದು, ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.
9) ಗುಣಮಟ್ಟವೊಂದೇ ಆಯ್ಕೆಯ ಏಕೈಕ ಮಾನದಂಡ.
10) ಕೃತಿ ಕಳಿಸಲು ಕೊನೆಯ ದಿನಾಂಕ ಡಿಸೆಂಬರ್ 31, 2024.
ಹೆಚ್ಚಿನ ಮಾಹಿತಿ ಸಂಪರ್ಕಿಸಿ:
ವಿಕಾಸ ಹೊಸಮನಿ – 9110687473
ಸುಭಾಷ ಪಟ್ಟಾಜೆ – 9645081966