ಕನ್ನಡದಲ್ಲಿ ಲಲಿತ ಪ್ರಬಂಧಗಳನ್ನು ಬರೆಯುತ್ತಿರುವ ಉದಯೋನ್ಮುಖ ಲೇಖಕ/ಕಿಯರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಯುವ ವಿಮರ್ಶಕ ವಿಕಾಸ ಹೊಸಮನಿ ಅವರ ಸಂಪಾದಕತ್ವದಲ್ಲಿ ಆಯ್ದ ಲಲಿತ ಪ್ರಬಂಧಗಳ ಸಂಕಲನವೊಂದನ್ನು ಹೊರ ತರಲಾಗುತ್ತಿದೆ. ಆಸಕ್ತ ಬರಹಗಾರರು ಲಲಿತ ಪ್ರಬಂಧಗಳನ್ನು ಕಳುಹಿಸಬಹುದು.
ನಿಯಮಗಳು
- ಬರಹಗಾರರಿಗೆ ಮುಕ್ತ ಪ್ರವೇಶವಿದ್ದು ಪ್ರವೇಶ ಶುಲ್ಕವಿರುವುದಿಲ್ಲ.
- ಬರಹದ ಗುಣಮಟ್ಟವೊಂದೇ ಆಯ್ಕೆಯ ಮಾನದಂಡ.
- ಸಂಕಲನದಲ್ಲಿ 25-30 ಪ್ರಬಂಧಗಳನ್ನು ಮಾತ್ರ ಪ್ರಕಟಿಸಲಾಗುವುದು.
- ಒಬ್ಬರು ಒಂದು ಪ್ರಬಂಧವನ್ನು ಮಾತ್ರ ಕಳುಹಿಸಬಹುದು.
- ಸ್ವತಂತ್ರ ರಚನೆಗಳಿಗೆ ಮಾತ್ರ ಅವಕಾಶವಿದೆ. ಅನುವಾದ, ಅನುಸೃಷ್ಟಿ ಮತ್ತು ರೂಪಾಂತರ ಮಾಡಿದ ಪ್ರಬಂಧಗಳಿಗೆ ಅವಕಾಶವಿಲ್ಲ.
- ಯಾವುದಾದರೂ ಪತ್ರಿಕೆ ಅಥವಾ ವಿಶೇಷಾಂಕದಲ್ಲಿ ಪ್ರಕಟವಾದ ಪ್ರಬಂಧವನ್ನು ಪರಿಗಣಿಸಲಾಗುವುದು. ಆದರೆ ಪುಸ್ತಕ ರೂಪದಲ್ಲಿ ಪ್ರಕಟವಾದ ಪ್ರಬಂಧಗಳಿಗೆ ಅವಕಾಶವಿಲ್ಲ.
- ಪ್ರಬಂಧವು 12 ಫಾಂಟ್ ಸೈಜಿನಲ್ಲಿ 2500 ಪದಗಳ ಮಿತಿಯಲ್ಲಿರಬೇಕು.
- ಲೇಖಕ/ಕಿಯರ ಪರಿಚಯ, ಪೂರ್ಣ ವಿಳಾಸ ಮತ್ತು ಒಂದು ಭಾವಚಿತ್ರವನ್ನು ಪ್ರತ್ಯೇಕವಾಗಿ ಕಳುಹಿಸಬೇಕು.
- ಪ್ರಬಂಧಗಳನ್ನು ಕಳುಹಿಸಲು ಕೊನೆಯ ದಿನ ಜುಲೈ 31, 2024.
- ಪ್ರಬಂಧಗಳನ್ನು ಸಂಪಾದಕರ ವಾಟ್ಸಪ್ ನಂಬರಿಗೆ ನಿಗದಿತ ದಿನಾಂಕದೊಳಗೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ವಿಕಾಸ ಹೊಸಮನಿ – 9110687473
ಡಾ. ಸುಭಾಷ್ ಪಟ್ಟಾಜೆ – 9645081966
1 thought on “ಲಲಿತ ಪ್ರಬಂಧಗಳ ಆಹ್ವಾನ”
ಒಳ್ಳೆಯ ಉದ್ದೇಶ!…. ಉತ್ತಮ ಅಭಿರುಚಿ!!….. ಸತರ್ಕ ಅನುಸಂಧಾನ!!!