ತುಡಿಯುತಿದೆ ಮನ
ಬ್ರಹ್ಮಾಂಡದಗಾಧ ಮೂಲೆಯಲೆಲ್ಲೋ
ಮಿಡಿಯುವ ಎದೆಯ ಸೇರಲು
ಬಂಜಾದ ನೆಲಕೆ ತಂಪಸುರಿಸುವ
ಪ್ರೀತಿಮೋಡಕೆ
ನಂಜಾದ ಮನಕೆ ಸಿಹಿನುಡಿಯ
ಪ್ರೇಮದೌಷಧಿಗೆ
ಹುಗಿದಿರುವ ಮಧುರಬೀಜದ
ಸುಖ ಮೊಳಕೆಗೆ
ಸಿಗದಿರುವ ಕನಸುಗಳಿಗೆ ಹಾರಲು
ಒಲವ ರೆಕ್ಕೆಗೆ
ಅಡಗಿಕೊಳ್ಳುವುದೆಲ್ಲಿ
ದುಸ್ವಪ್ನದಲೆಗಳಿಗೆ
ದನಿಯೊಂದು ಸಾಕು
ನಿಶ್ಯಬ್ದ ಇರುವೆಡೆ
ಕದಲಿಸಲು ಒಂದು ಎದೆಯ
ಮನವೊಂದು ಸಾಕು
ಕರುಣೆಯಿಲ್ಲದೊಡೆ
ಸುರಿಸಲು ಕಂಬನಿಯ
ಹೆಜ್ಜೆಯೊಂದು ಸಾಕು
ಹಾದಿಯಿಲ್ಲದೆಡೆ
ಸೃಜಿಸಲು ಹೊಸ ದಾರಿಯ
ಒಳ್ಳೆಯ ಮನಸೊಂದು
ತೋರುವ ದಾರಿ
ಮಸುಕಾದರೂ ಮೊದಲಿಗೆ,
ಬೆಳಕು ಚೆಲ್ಲುತ್ತದೆ
ಗುರಿ ತಲುಪಿದಾಗ
ಅಷ್ಟೆಲ್ಲಾ ಅತ್ತೂ ಕರೆಯುವುದೇಕೆ
ನೆಲೆಯಿರದೆಡೆ
ಸುತ್ತಲೂ
ನಗು ಇರಲು
ಸಾಯುವ ಕ್ಷಣ
ಹೇಗಾದರೂ ಬಂದೀತು
ಬದುಕುವ ಕ್ಷಣ
ಬರಿದಾಗಬಾರದು
* ಎಂ.ವಿ. ಶಶಿಭೂಷಣ ರಾಜು
2 thoughts on “ಒಂದು ದಾರಿಗೆ ಕಾಯುವ ಕ್ಷಣ”
ಚೆನ್ನಾಗಿ ದೆ..
ಧನ್ಯವಾದಗಳು ಮೇಡಂ