ಯಾರ ಛಾತಿಯಲೊ ಯಾವ ಭಾವದಲೊ
ಉದಯಿಸಿತೆನ್ನ ನುಡಿ
ಯಾವ ದೇಸಿಯೊ ಯಾವ ಮಾರ್ಗವೊ
ಹಲ್ಮಿಡಿ ಮಿಡಿಯೆ ನುಡಿ
ಇದು ಕನ್ನಡ ನಾಡನುಡಿ
ಪೂರ್ವಕಾಲದಲೆ ಹರಿಯಿತು ಕನ್ನಡ
ನಾಡಿನ ಜೀವನದಿ
ಸಾವಿರ ಸಾವಿರ ವರುಷ ಕಳೆದರು
ಉಳಿದಿದೆ ಜೀವನುಡಿ
ಇದು ಕನ್ನಡನಾಡ ನುಡಿ
ಭಾರತ ಜನನಿಯ ಸುಪುತ್ರಿ ಇವಳಲಿ
ಕನ್ನಡದೊರತೆ ಕಿಡಿ
ಅನ್ಯಭಾಷೆಗಳು ಮುತ್ತಿಮುಸುಕಿದರು
ಜೀರ್ಣಿಸಬಲ್ಲ ನುಡಿ
ಇದು ಕನ್ನಡ ನಾಡನುಡಿ
ಭಾಷೆ ಯಾವುದೊ ಧರ್ಮ ಯಾವುದೊ
ಕನ್ನಡ ನಮ್ಮ ನುಡಿ
ಸಾವಿರ ಕವಿಗಳು ಏಕ ಕಂಠದಲಿ
ಮೊಳಗಿದ ಧೀರನುಡಿ
ಇದು ಕನ್ನಡ ನಾಡನುಡಿ
1 thought on “ನಾಡನುಡಿ”
ಒಳ್ಳೆಯ ಕವಿತೆ..