ಹಾಗೆ ಕಾಯ ಬೇಡ, ನೀನೆ ಅಲ್ಲವೇ ಕಾಯುವವನು
ಸಕಲ ಜೀವರಾಶಿಗಳ ಜೀವ ಒಂದೆ ಸೂತ್ರ ದಲಿ ಬಂಧಿ
ಮುಕ್ಕೋಟಿ ದೇವತೆ ಗಳ ಕಂಡಿಲ್ಲ
ಕಾಣುವವ ನೀನೆ ಕಾಣಿಸುವವ ನೀನೆ
ಕರಮುಗಿದು ಕೇಳುವೆ ಕೋಟಿಕರಗಳ ಒಡೆಯ
ಸೂರಿಲ್ಲದಅಮ್ಮನ ಚಿಂದಿ ಸೆರಗನ್ನೆ ಹೊದ್ದ
ಹಸುಗೂಸಿನ ನೆತ್ತಿಯ ಸುಡದಿರು ಕಂಡ್ಯ
ಸೂರಿಲ್ಲದವರ ಬವಣೆ ನಿನಗೆ ಗೊತ್ತಿರಬೇಡವೇ ಸೂರಿಯ
ಮರ ಮರಗಳ ಮುಂಡಮೋಚಿ ಅಗಲ ಗೊಳ್ಳುವ ಹೆದ್ದಾರಿ ಕುಂಡದಲಿ
ತಪತಪನೆ ಒಡಲನೊಡ್ಡುವ ಸುಧನ್ವ ವ್ರತಿಗಳಸುಡದಿರು ಕಂಡ್ಯ
ಒಣ ನಾಲಿಗೆ ಯ ಚಾಚಿ ತೇಕುತಿರುವ ಹುಲುಹುಲ್ಲು ಸೇರಿ
ಬಡಪಾಯಿ ಜೀವಗಳು ನಿಷ್ಕರುಣಿ.ಆತಪಕೆ
ನಿಲಲು ನೆರಳಿಲ್ಲ,ಒರಗಲೆಡೆಯಿಲ್ಲ,
ಧರೆಯ ದೇವನೆ
ನೀನೆ ಹೀಗಾದರೆ ಹೇಗೋ
ಲೋಕದ ಕಣ್ಣು ನೀನು, ಕಾಣ ಬೇಡವೇ ಕಣ್ಣು,
ಕಾಯಬೇಡವೇ
* ಮಹೇಶ್ವರಿ. ಯು

2 thoughts on “ಸೂಯ೯ದೇವಾ”
ಸೊಗಸಾಗಿದೆ.
ಕಣ್ಣಿಗೆ ಕಾಣುವ ದೇವರೆಂದರೆ ಸೂರ್ಯನೊಬ್ಬನೇ.
ಅಭಿನಂದನೆಗಳು.
ಧನ್ಯವಾದಗಳು