ಬೆಣ್ಣೆಯಂಥ ಸಂಬಂಧಗಳು ಕಾದ ಹಂಚಿನ ಮೇಲೂ ತಂಪಾದ ನೀರಿನಲ್ಲೂ ಸ್ಥಿರ ಸುಂಟರಗಾಳಿಯೂ ಬಾಧಿಸದ ಅನನ್ಯ ಬಂದ ಆ ದಿನಗಳಲ್ಲಿ ಕಾಯುವ ಕಾಯಿಸುವ ಪ್ರೀತಿಸುವ ಪ್ರೀತಿಸಲ್ಪಡುವ ನೋಯಿಸುವ ನೋಯಿಸಲ್ಪಡುವ ಚೆಂದದ ಮಹಾಸಾಗರ ವಿವೇಚನೆಗೆ ನಿಲುಕದ ಕಾಲ ಬಂಡಿ ಉರುಳಿ ಹೊಸ ಸಂಬಂಧಗಳು ಸೇರ್ಪಡೆಯಾಗಿ ನದಿಗಳಂತೆ ವಿಚಲಿಸಿ ಹಳೆಯದ ಸೊರಗಿ ಹಳೆ ನೆನಪುಗಳಲ್ಲಿ ಕಾಲನ ಪವಾಡವೇ ಸರಿ ಅಣ್ಣ ಅಣ್ಣನಲ್ಲ ತಮ್ಮ ತಮ್ಮನಲ್ಲ ಅಕ್ಕ ಅಕ್ಕಳಲ್ಲ ತಂಗಿ ತಂಗಿಯಲ್ಲ....ಹೀಗೆ ಬದಲಾವಣೆ ದೂರ ಸರಿದಷ್ಟು... ದೂರನೇ ಜಗ್ಗಿದಷ್ಟು ಹರಿಯುವ ದಾರ ಜೋಡಿಸಲಾಗದ ಒಡೆದ ಕನ್ನಡಿ ಕೆಟ್ಟು ಹೋದ ಮುಂಜಾನೆ ಸಾರು ಎಲ್ಲವೂ ಹಳಸಿದಂತೆ ಕಿರಿದಾಗುವ ಸಂಬಂಧಗಳಿಗೆ ಪಶ್ಚಾತಾಪದ ಕಿರು ದಾರಿಯಿಲ್ಲ ಹಳಹಳಿಕೆಯೂ ಇಲ್ಲ ಬಂದಂತೆ ಹೋಗುವುದೆಂಬ ಸಬೂಬ ಬೇರೆ. *ಮಾಲಾ.ಮ.ಅಕ್ಕಿಶೆಟ್ಟಿ. ಬೆಳಗಾವಿ.
