ಮಾತನರಿಯದ ಮಂದಿ ನಡುವೆ ನನ್ನ ನಯನ ಓದಿದವ ನೀನೊಬ್ಬನೇ ನನ್ನ ಮೌನದ ಅರ್ಥ ಬರೆದವನೂ ನೀನೆ ನನ್ನೆದೆಯ ರಾಗ ನೀನೆ ತಾನೆ?! ಅದರೊಂದಿಗೆ ಬೆರೆತ ತಾಳವೂ ನಿನ್ನದೇನೆ! ನಗುವ ನಿನ್ನ ಶ್ಯಾಮಲ ವರ್ಣ ಸಮ್ಮೋಹನ ಮಾಡಿದೆ ಮೋಹನ ಆಹಾ!ಆ ಮುರುಳಿ ಗಾನ ಈ ಜೀವಕೆ ಜೀವ ತುಂಬಿದ ನವಚೇತನ ನನ್ನ ಬಾಳ ವಸಂತ ನಿನ್ನಾಗಮನ!! ಮಂದ ಮಂದ ಬೆಳಕ ಮಣ್ಣ ಹಣತೆ ನಿನ್ನ ಕರಸೋಕೆ ಬಂತು ಹೊಳೆವ ಪ್ರಜ್ವಲತೆ ಓಡಿದೆ ಒಡಲೊಳಗಿನ ವ್ಯಾಕುಲತೆ ಮಿಡಿದಿದೆ ಹೃದಯದಿ ಭಾವಗೀತೆ! ಬೆಳಗುತಿರಲಿ ಜಗದಿ ನಮ್ಮ ಪ್ರೀತಿ ಪ್ರಣತೆ ಜ್ವಲಿಸುತಿರಲಿ ಅಂತರಂಗದಲಿ ಅರಿವಿನ ಜ್ಯೋತಿ ಭವ್ಯ ದಿವ್ಯ ಕಾಂತಿ ಹೊಮ್ಮಿ ನಿತ್ಯವೂ ದೀಪಾವಳಿಯಂತೆ!!*ಕುಸುಮಾ. ಜಿ. ಭಟ್*

1 thought on “ಆರದಿರಲಿ ಬೆಳಕು”
ಚೆನ್ನಾಗಿದೆ. ಅಭಿನಂದನೆಗಳು.