ದೀಪಾ

ತಳೆದ ತಮವನು ದೂರ ಸರಿಸಿ
ಥಳಥಳಿಸುವಂತೆ
ಬೆಳಗು ಬಾ ದೀಪವನು,
ಒಲವ ತೈಲವನೆರೆದು
ಚೆಲುವಿನಿಂದಲಿ
ಬೆಳಗು ಬಾ
ಪ್ರೇಮ ಪ್ರಣತಿಯನು.

ಮೋಡಿಗಾತಿ ಅತ್ತ
ನೋಡು ಅಲ್ಲಿ ಬೆಳಗುತಿಹ
ಜೋಡಿ ಸೊಡರುಗಳು,
ಕೂಡಿ ಬಾಳುವ ಬಾರೆ
ಅಂತೆಯೇ ನಾವು
ಗಾಢ ಪ್ರೀತಿಯಲಿ.

  • ಹರ್ಷವರ್ಧನ ಹೆಗಡೆ ನಿಟ್ಟೂರು

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ದೀಪಾ”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter