ಗಜಲ್

ಮನದಿ ಹುದುಗಿದ ಬಯಕೆಯ ಲತೆ ಚಿಗುರಿಸಿದವರು ನೀವಲ್ಲವೆ
ಮುದ್ಧಿಸಿ ಲಜ್ಜೆಯ ಪರದೆ ಸರಿಸಿ ನಗಿಸಿದವರು ನೀವಲ್ಲವೆ

 ಬಳ್ಳಿ ಹುಲುಸಾಗಿ ಬೆಳೆಯಲು ಅನುರಾಗದ ಆಸರೆ ಬಯಸಿತು
 ಒಲವಲಿ ಬಂಧಿಸಿ  ತೋಳಬಂದಿ ತೊಡಸಿದವರು ನೀವಲ್ಲವೆ
 
 ಮರಳುಗಾಡಲಿ ಪರಿಮಳದ ಸುಮ ಅರಸುತ ಬಳಲಿ ಬೆಂಡಾದೆ 
 ಸಂತಸದ ಕಂಪು ಸೂಸುವ ಹೂ ಮುಡಿಸಿದವರು ನೀವಲ್ಲವೆ
 
 ಶೋಕ ಸಾಗರದಿ ಮುಳುಗಿ ಏಕಾಂಗಿಯಾಗಿದೆ ಮನವು ಇಂದು
  ಪ್ರೇಮ ಲೋಕಕ್ಕೆ ಪಟ್ಟದರಸಿ ಮಾಡಿದವರು ನೀವಲ್ಲವೆ
  
 ಅಮವಾಸ್ಯೆಯ ಇರುಳು ಗಗನದಲ್ಲಿ ಶಶಿಯ ಹುಡುಕುತಾ ಹೊರಟೆ
  ಚಂದಿರನಾಗಿ ಹೃದಯ ಕಡಲು ಉಕ್ಕಿಸಿದವರು ನೀವಲ್ಲವೆ
  
 ಜಗದ ಜಾತ್ರೆಯಲಿ ಮೂಕಿಯಾಗಿ ನೋವುಂಡು ಬಾಳಿದ ಜೀವ 
 ಪಿಸುಮಾತಲಿ ಪ್ರೀತಿ ರಾಗವ ನುಡಿಸಿದವರು ನೀವಲ್ಲವೆ
 
 ಗಾಣದ ಎತ್ತಿನಂತೆ ಸುತ್ತಿದೆ ಮಾಯಬಟ್ಟೆ ಕಟ್ಟಿಕೊಂಡು
  ಮೋಹವ ಅಳಿಸಿ ದಿವ್ಯ" ಪ್ರಭೆ" ತೋರಿಸಿದವರು ನೀವಲ್ಲವೆ

              * ಪ್ರಭಾವತಿ ಎಸ್ ದೇಸಾಯಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter