ನೋವಿಗೂ ಹೆಸರಿದೆಯೇ…?

ಎಂದಿನಿಂದಲೋ ಮೌನವಾಗಿರುವೆ
ನಿಮಗೆ ಹಾಗನಿಸಬಹುದು

ಆದರೆ ನನ್ನೊಳಗೆ ಅದೆಷ್ಟು ಬಾರಿ ನಡೆದಿದೆ ಸ್ವಗತ ಸಂಭಾಷಣೆ !
ಜೊತೆಗೊಂದಿಷ್ಟು  ಮುನಿಸು ಹುಸಿಕೋಪ, ಉದಾಸೀನತೆ 
ಕೊನೆಗೆ ನನಗೆ ನಾನೇ ಅನುಕಂಪ ತೋರಿ ತುಸು ನಕ್ಕಂತೆ ಅನಿಸುವುದು, ನಂಗೊತ್ತು 
ನಿಮಗಿದರ ಅರಿವಿಲ್ಲ, ಅರಿತರೂ ಅವೆಲ್ಲ ಅನಗತ್ಯ ನಿಮ್ಮ ಲೋಕಕ್ಕೆ

ಹೃದಯ ಖಾಲಿ ಖೋಲಿಯೇನಲ್ಲ
ಅಲ್ಲೊಂದು ಉಯ್ಯಾಲೆಯಲಿ ಜೀಕುತ್ತಿರುವ ನೋವಿನ ಹೆಸರಾದರೂ ಏನೋ ?

ಬಹುಶ: ಆಗಾಗ ಜಿನುಗಿರಬಹುದಾದ ಗುನುಗಿದ ಹಾಡಿಗೆ ಗರಿಗೆದರಿದ ಭಾವಗಳೇ ನಂಜಾಗಿ
ರಾತ್ರಿಯ ನಿದಿರೆಯನ್ನೂ ಜೊತೆಗೆ 
ಕನಸುಗಳನ್ನೆಲ್ಲ ನುಂಗಿದವೋ

ಹಗಲಿನ ಪ್ರಕರ ಬೆಳಕಿನಲ್ಲಿ ಆಸೆಗಳ ಕರಗಿಸಿ
ಕನಸಿನ ಹೂವುಗಳ ಪಕಳೆ ಕಿತ್ತು
ನಡುಬೀದಿಯಲಿ ಅನಾಥವಾಗಿಸಿ 
ರಕ್ತ ಹೆಪ್ಪುಗಟ್ಟಿದಂತಹ
ಭಾವಗಳ ಹೀಗೆ  ಜಡವಾಗಿಸಿದ ನೋವದಾವುದೋ...    *  ಶ್ವೇತಾ ಮಂಡ್ಯ
  

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ನೋವಿಗೂ ಹೆಸರಿದೆಯೇ…?”

  1. ಶೇಖರಗೌಡ ವೀ ಸರನಾಡಗೌಡರ್

    ಈ ಅನುಭವ ಸಾಮಾನ್ಯವಾಗಿ ಎಲ್ಲರಿಗೂ ಆಗುವಂಥಹುದೇ.
    ಚೆನ್ನಾಗಿದೆ. ಅಭಿನಂದನೆಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter