ಗಜಲ್

ಮದಿರೆ ಅಮಲಿನಲಿ ನಿತ್ಯ ಹೃದಯ ಕದ ತಟ್ಟದಿರು
ಬೆಳದಿಂಗಳ ಇರುಳು ಕನಸಲಿ ಬಂದು ಕಾಡದಿರು

ಜಗವು ಹೆಣೆದ ಬಣ್ಣದ ಬಲೆಯಲಿ ನನ್ನ ನೂಕಿದೆ
ಹರಿಯುವ ಒಲವ ನದಿಗೆ ಜಾತಿ ಗೋಡೆ ಕಟ್ಟದಿರು

 ಮೋಹಿಸಿ ತಬ್ಬಿದ ಹೊಸ ಹೂವಿಗೆ ಪರಿಮಳವಿಲ್ಲ
 ಮೆಚ್ಚಿ ಒಂದಾದ ಗೆಳೆತನಕೆ ಮೋಸ ಮಾಡದಿರು

ಅನುರಾಗದಿ ನಗುತ ಹಸಿರು ಬಣ್ಣ ಬಳಿದೆ ಮುಖಕೆ
ಪ್ರೀತಿಯ ಕೊಂದು ಮೊಸಳೆ ಕಣ್ಣೀರನು ಸುರಿಸದಿರು

ಕಪಟದ ಮೋಹ ಹೊದ್ದು  ದೇವದಾಸನಾಗಿರುವೆ
ಗೋರಿಯಲಿ "ಪ್ರಭೆ"ಮಲಗಿಸಿ ನಿಶೆಯಲಿ ಬಿಕ್ಕದಿರು

                 * ಪ್ರಭಾವತಿ ಎಸ್ ದೇಸಾಯಿ, ವಿಜಯಪುರ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಗಜಲ್”

  1. Shivakumar Kadasetty

    ಹಸಿದ ಹೊಟ್ಟೆಗೆ ಕುಡಿದ ಮಜ್ಜಿಗೆ
    ತಂಪೆರದಂತಾಯ್ತು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai