ಗಡಿನೆಲ

ನಿರಂತರ ರಣರಂಗ
ನಿಟ್ಟುಸಿರೇ ಉಸಿರಪಾಡು
ಕಾದ ಕಾವಲಿಯದು
ಮಳೆಹನಿಗಳೂ ಕಿರುಚಾಡುತ್ತವೆ !
ಇಳೆಯೊಳಗೆ ಇಳಿಯುವುದಿಲ್ಲ !

ಕರುಣೆಯಿಲ್ಲದ ಕತ್ತಿಮಸೆವನ ಕೈ
ಸೋಲುವುದೇಯಿಲ್ಲ
ಅರೆಸತ್ತು ಬಾಳುವ ವೀರ !
ಹೆದ್ದೈವವ ನೆನೆ ನೆನೆದು
ರಣಕಿಡಿಗಳಾಗಿ

ಯೋಧ ಯೋಧನ ಎದೆಯ ಕುದಿ
ನೂರ್ಮಡಿಯಾಗಿ ಹತ್ತುತಲೆಯವನಂತೆ
ರಕ್ತಬೀಜಾಸುರನಂತೆ ಕಾದಾಡಬೇಕು !
ತುಪಾಕಿನ ಉಸಿರಷ್ಟೇ ಕೇಳಬೇಕು!
ಜೀವಂತಿಕೆಯದ್ದಲ್ಲ…..

ನೂರು ದೇವರ ಹರಕೆ ಹೊತ್ತರೂ
ಹಾಲುಣಿಸಿದೆದೆ ಬಿಕ್ಕುತ್ತದೆ ಈ ನೆಲದಲ್ಲಿ
ಸತಿಸುತರ ಗೋಳು ದುರುಗುಟ್ಟಿದ
ಬೆಳದಿಂಗಳಿಗೂ ಬೆವರಿಳಿಸುತ್ತದೆ…..
ಈ ನೆಲ……. ಗಡಿನೆಲ….

———-0———–

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಗಡಿನೆಲ”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter