ಈ ವರುಷ ವರ್ಷಋತು ತಡವಾಗಿ ಆಗಮಿಸಿದೆ. ಎಂದಿನಂತೆ ಈಗ ವರ್ಷಧಾರೆಯಲ್ಲಿ ಮಿಂದೆದ್ದ ಭೂರಮೆ ಕವಿಯ ಎದೆಯೊಳಗಿನ ಹಾಡಿಗೆ, ಕಥೆಗಾರನ ಕಲ್ಪನೆಗೆ ಜೀವತುಂಬುವ ಮನೋಭೂಮಿಕೆಯನ್ನು ಒದಗಿಸಿದೆ.
ವರ್ಷಋತು ನೆಲದೊಡಲಿನ ಬಣ್ಣಗಳನ್ನು ಪ್ರಕೃತಿಗೆ ಪರಿಚಯಿಸುವ ಪರ್ವಕಾಲ. ಎಲ್ಲೆಡೆ ತಂಪುಹೊತ್ತು ಧರೆಯೊಳಗಿಂದ ಜೀವತಳೆಯುವ ಸಸ್ಯಸಂಕುಲಗಳ ಚೇತೋಹಾರಿ ಲವಲವಿಕೆ. ಮರ, ಗಿಡ, ಬಳ್ಳಿ, ಹುಲ್ಲುಗಳಲ್ಲಿ ಹೂವತೇರ ಮೆರವಣಿಗೆ. ಕಾಡುಮೇಡು, ಹಾದಿ, ನದಿತೊರೆಗಳ ಬದಿಗಳಲ್ಲಿ ಪೊಗದಸ್ತಾಗಿ ಬೆಳೆದುನಿಂತ ಹಸಿರ ಮಧ್ಯೆ ಬಣ್ಣ ಬಣ್ಣದ ಹೂಗಳ ಚಿತ್ತಾರ. ನೋಡುವ ಕಣ್ಣುಗಳು ಸೋಲುವಷ್ಟು ವೈವಿಧ್ಯಮಯ ವರ್ಣಮಿಶ್ರಣ! ಕರಾವಳಿಯ ಉದ್ದಕ್ಕೂ ನೇಸರನುದಯದಲ್ಲಿ ತೊಟ್ಟಿಕ್ಕುವ ಇಬ್ಬನಿಯ ಮಧ್ಯೆ ನಾಚುತ್ತಾ ಅರಳುವ, ಮೆಲುಗಾಳಿಗೆ ತೊನೆದಾಡುವ, ಕಂಡವರನ್ನು ಬರಸೆಳೆಯುವ ವನಸುಮಗಳ ಚಿತ್ರಪಟಗಳೊಂದಿಷ್ಟು ಇಲ್ಲಿವೆ.
1 thought on “ವನಸುಮಗಳ ಹಾದಿಯಲ್ಲಿ……”
Very lovely and lively presentation. Congratulations 🎉🎉🙏🙏