ಹನಿಹನಿಯಲಿ ತನಿ ಸೆಳೆತ ಸೋನೆ ಮಳೆಯ ಸಂಗೀತ ಹಿತವಾಗಿ ಬಳಸುತ ಬರಲು ಹೂವೆದೆಯಲಿ ನವಗೀತ ಮರಿಗುಡುಗು ಮಿಂಚು ಮೋಡ ಇನಿದನಿಯಲಿ ಹಾಡಲು ಕೂಡಿ ಸವಿರಾಗ ಭಾವದ ಬಂಧ ಕಂಗಳಲಿ ಕಾಂತಿಯ ಬೀರಿ ಮೇಘಗಳ ಮೇಳದಲ್ಲು ನೂರೊಂದು ಕವಿತೆಯ ಸಾಲು ಚಿತ್ತಾರದ ಮಾಟದಲ್ಲು ಈ ಭೂಮಿ ಬಾನು ಬಯಲು ಒಂದೊಂದು ತಳಿರುಗಳಲ್ಲಿ ಮಣಿಬಿಂದು ಕಾಯುತಿರಲು ಮೊಗ್ಗೊಂದು ಮೂಡುವಲ್ಲಿ ಗಿರಿವನದಲಿ ನಗೆಹೊನಲು ನೀಲಿಯಲಿ ಹಾಸಿದ ಮಂಜು ಎಳೆಬಿಸಿಲ ತೂಗಿನಲಿರಲು ಸೋನೆಮಳೆ ಧಾರೆಯಲ್ಲಿ ಭಾವಗಳ ಹೊಸ ಹೊನಲು * ಅನಿತಾ ಪಿ. ತಾಕೊಡೆ
ಭಾವಗಳ ಹೊಸ ಹೊನಲು
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಅನಿತಾ ಪಿ. ತಾಕೊಡೆ
ಅನಿತಾ ಪಿ. ತಾಕೊಡೆ
ಶಿಕ್ಷಣ ; ಮುಂಬೈ ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿಯನ್ನು ಪ್ರಥಮ rank ಪಡೆಯುವುದರ ಮೂಲಕ ಎಂ.ಬಿ.ಕುಕ್ಯಾನ್ ಬಂಗಾರದ ಪದಕ ಗಳಿಸಿದ್ದಾರೆ (2017-19)
ಐದು ಕೃತಿಗಳು ಲೋಕಾರ್ಪಣೆಗೊಂಡಿವೆ;
ಕಾಯುತ್ತಾ ಕವಿತೆ ಅಂತರಂಗದ ಮೃದಂಗ (ಕನ್ನಡ ಕವನ ಸಂಕಲನ) ಮರಿಯಲದ ಮದಿಮಾಲ್ (ತುಳು ಕವನ ಸಂಕಲನ).
ಗದ್ಯ ಬರಹ: ‘ಸವ್ಯಸಾಚಿ ಸಾಹಿತಿ’ ‘ಮೋಹನ ತರಂಗ’(ಜೀವನ ಚರಿತ್ರೆ)
ಎರಡನೇ ಕವನಸಂಕಲನ “ಅಂತರಂಗದ ಮೃದಂಗ” ದ ಹಸ್ತಪ್ರತಿಗೆ, ಜಗಜ್ಯೋತಿ ಕಲಾವೃಂದ ಮುಂಬೈ ವತಿಯಿಂದ “ಶ್ರೀಮತಿ ಸುಶೀಲಾ ಎಸ್ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ”(2016) ಲಭಿಸಿದೆ. ಇತ್ತೀಚೆಗೆ “ಜನಸ್ಪಂದನ ಟ್ರಸ್ಟ್(ರಿ) ಸುವ್ವಿ ಪಬ್ಲಿಕೇಷನ್ಸ್, ಶಿಕಾರಿಪುರ” ಕೊಡಮಾಡುವ “ಅಲ್ಲಮ ಸಾಹಿತ್ಯ ಪ್ರಶಸ್ತಿ”(2018) ಕೂಡ ಈ ಕೃತಿಗೆ ಲಭಿಸಿದೆ.
ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಮೈಸೂರು ಇವರು ಎರ್ಪಡಿಸಿದ ಕೆ ಎಸ್ ನ, ನೆನಪಿನ ಪ್ರೇಮ ಕಾವ್ಯಸ್ಪರ್ಧೆಯಲ್ಲಿ ಎರಡು ಬಾರಿ ಪ್ರೇಮಕಾವ್ಯ ಪುರಸ್ಕಾರ,(2011, 2015) ಹಾಗೂ 2017ರಲ್ಲಿ “ವಿಶ್ವ ಕವಿ ಕುವೆಂಪು ಕಾವ್ಯ ಪುರಸ್ಕಾರ” ಲಭಿಸಿದೆ.
ಮಹಾರಾಷ್ಟ್ರ ನವಚಿಂತನ ಸಂಸ್ಥೆಯಿಂದ ಕವಿರತ್ನ ಪುರಸ್ಕಾರ(2012-13), ಮುಂಬಯಿ ಕಲಾಜಗತ್ತು ಸಂಸ್ಥೆಯ ವತಿಯಿಂದ “ದಿ ಗೋಪಾಲಕೃಷ್ಣ ಸ್ಮಾರಕ ಪ್ರಶಸ್ತಿ(2013), ಡೊಂಬಿವಲಿ ತುಳುಕೂಟ ವತಿಯಿಂದ ‘ತುಳುಸಿರಿ’ಪ್ರಶಸ್ತಿ(2013), ಕಾವ್ಯಸಿರಿ ಪ್ರಶಸ್ತಿ (2019) ಲಭಿಸಿದೆ.
2019ರಲ್ಲಿ ಮೈಸೂರು ಅರಮನೆಯ ವಿಶ್ವ ವಿಖ್ಯಾತ ದಸರಾ ಕವಿಗೋಷ್ಠಿಯಲ್ಲೂ ಭಾಗವಹಿಸಿದ್ದಾರೆ. ಸಂಕ್ರಮಣ ಸಾಹಿತ್ಯ ಸ್ಪರ್ಧೆಯಲ್ಲಿ “ಅಪ್ಪ ನೆಟ್ಟ ಸೀತಾಫಲದ ಮರ” ಕಥೆಗೆ ಸಂಕ್ರಮಣ ಸಾಹಿತ್ಯ ಬಹುಮಾನ ಲಭಿಸಿದೆ (2017).
ಪ್ರಜಾವಾಣಿ ಪತ್ರಿಕೆಯ ಪ್ರೇಮಪತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲಭಿಸಿದೆ (2018).ಹೀಗೆ ಇವರ ಹಲವಾರು ಕತೆ ಕವಿತೆಗಳಿಗೆ ಬಹುಮಾನಗಳು ಲಭಿಸಿವೆ.
ಕತೆ, ಕವನ, ಲೇಖನ, ಪ್ರವಾಸ ಕಥನ, ಸಂದರ್ಶನ ಲೇಖನಗಳು, ಅಂಕಣ ಬರಹಗಳು ಒಳನಾಡಿನ ಮತ್ತು ಹೊರನಾಡಿನ ಪತ್ರಿಕೆಯಲ್ಲಿ ನಿರಂತರವಾಗಿ ಪ್ರಕಟವಾಗುತ್ತಲಿವೆ. ಮುಂಬಯಿ ಮತ್ತು ಮಂಗಳೂರು ಆಕಾಶವಾಣಿಯಲ್ಲಿ ಕತೆ ಮತ್ತು ಕವನಗಳು ಪ್ರಸಾರಗೊಂಡಿವೆ.
ಸೃಜನಾ ಲೇಖಕಿಯರ ಬಳಗ ಮುಂಬೈ ಇದರ ಜೊತೆ ಕೋಶಾಧಿಕಾರಿಯಾಗಿ ಹಾಗೂ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರಘಟಕದ ಕಾರ್ಯಕಾರಿ ಸಮಿತಿಯ ಸದಸ್ಯತ್ವವನ್ನು ಪಡೆದಿದ್ದಾರೆ.
All Posts
2 thoughts on “ಭಾವಗಳ ಹೊಸ ಹೊನಲು”
Very nice…
Sundara bhavageete, prakritiyalli kunyuva maleya romanchaka sobagu kavite yalli abhivyakti yaguva pranayada sangeeta….kavite madhuravagide.