ಬರೆಯುವನೇ ಕವಿ ಎಂದು
ಬಯಸಿದಂತೆ ಖಾಲಿ ಹಾಳೆ
ಬರಬಹುದೇ ಮಳೆ ಎಂದು
ಕಾದು ಕುಳಿತಿದ್ದಾಳೆ ಇಳೆ
***** ***** ***** *****
ಬಡವನೋ, ಸಿರಿವಂತನೋ
ಈ ಮಳೆಗೆ ಭೇದವಿಲ್ಲ
ರಂಗಿಲ್ಲದೆಯೇ ನೀರ ರಂಗೋಲಿ
ಅಂಗಳದ ತುಂಬೆಲ್ಲಾ
***** ***** ***** *****
ಮಳೆಯೆಂದರೆ
ಅವನ ಪ್ರೀತಿಯಂತೆ
ಸುರಿದರೆ ಸುರಿದಂತೆ
ನಿಂತರೆ ನಿಂತಂತೆ
***** ***** ***** *****
ಓ ಮಳೆಯೇ ನೀ
ಬಿಂದು ಬಿಂದುವಾಗಿ ಬಂದಿ
ಬಿರಬಿರನೆ ಬಿರುಸಾಗಿ
ಹಳ್ಳಕೊಳ್ಳಗಳಲಿ ಬಂಧಿ
*ಸೌಮ್ಯ ಪ್ರವೀಣ್







