ಗಜಲ್

ಗಜಲ್  (ಮಾತ್ರೆ ೨೫)

ಹೃದಯದಿ ಮುಸುಕಿದ ಮಂಜು ಬಿಸಿ ಅಪ್ಪುಗೆಯಲಿ ಕರಗಲಿ ದೊರೆ
ಬರುಡಾದ ಎದೆ ಅಂಗಳದಲಿ ಒಲವಿನ ಲತೆ ಚಿಗುರಲಿ ದೊರೆ

ಬಾಳ ಬೇಗೆಯಲಿ ಒಣಗಿದೆ ಮನದ ಸಂತಸವು ನೀ ಇರದೆ
ಮಾದಕ ನಯನ ಸರೋವರದಲಿ ಕನಸುಗಳು ಅರಳಲಿ ದೊರೆ

ಮುನಿದು ಗುಡುಗಿ ಸಿಡಿಲಾಗಿ ಮಿಂಚಿ ಮಾಯವಾದೇಕೆ ನೀನು
ನಿನ್ನ ಸಂಗದಿ ಪಡೆದ ಮಧುರ ಸುಖವ ಹೇಗೆ ಮರೆಯಲಿ ದೊರೆ

ಹುಣ್ಣಿಮೆ ರಾತ್ರಿ ಹರಿದಾಡುತಿದೆ ಪೊರೆ ಕಳಿಚಿದ ಮಿಡಿನಾಗ
ನಮ್ಮ ಪ್ರೀತಿ ಬೆಸುಗೆ ಕುಡಿ ಉಡಿಯಲಿ ತುಂಬಿ ಬೆಳೆಯಲಿ ದೊರೆ

ಇರುಳ ಪಯಣ ಜೊತೆಯಾಗದೆ  ಸಾಗಿದೇಕೆ ಕವಲು ದಾರಿಗೆ 
ನೀ ನಡೆವ ಹಾದಿಯಲಿ ಚಂದಿರನ "ಪ್ರಭೆ"ಯು ಬೆಳಗಲಿ ದೊರೆ

ಪ್ರಭಾವತಿ ಎಸ್ ದೇಸಾಯಿ
ವಿಜಯಪುರ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai