ಪ್ರಿಯರೆ,
“ಇದೇ ಬರುವ ಭಾನುವಾರ ಅಂದರೆ ಏಪ್ರಿಲ್ 30, 2023 ರ ಬೆಳಿಗ್ಗೆ 10.30 ಕ್ಕೆ ನನ್ನ ಕಥಾ ಸಂಕಲನದ ಬಿಡುಗಡೆ. ವಾಸ್ತವಿಕವಾಗಿ ನಾನು ಇದನ್ನು ಹೀಗೆ ಹೇಳಬೇಕು: ಒಳ್ಳೆಯ ಗೆಳೆಯ, ಅಷ್ಟೇ ಒಳ್ಳೆಯ ಕಥೆಗಾರ ಶ್ರೀಧರ ಬಳಗಾರರ ಕಥಾ ಸಂಕಲನ, ಕಾದಂಬರಿ, ಅಲ್ಲದೆ 94ರ ಹರಯದ ಹಿರಿಯ ಎ ಎನ್ ನಾಗರಾಜ್ ಅವರ ಬಾಳಿನ ನೆನಪುಗಳನ್ನು ಹೊತ್ತ ಅನನ್ಯ ಪುಸ್ತಕ ಈ ಮೂರು ಪುಸ್ತಕಗಳ ಜೊತೆಯಲ್ಲಿ ನನ್ನದೊಂದು ಪುಸ್ತಕ ಬಿಡುಗಡೆ. ಈ ಬಿಡುಗಡೆ ಕಾರ್ಯಕ್ರಮದ ಎಲ್ಲ ವಿವರಗಳು ಇದರ ಜೊತೆಗಿರುವ ಆಮಂತ್ರಣದಲ್ಲಿವೆ. ದಯವಿಟ್ಟು ಬೆಂಗಳೂರಿನಲ್ಲಿರುವ ನನ್ನೆಲ್ಲ ಸ್ನೇಹಿತರು, ಬಂಧುಗಳು ಈ ಕಾರ್ಯಕ್ರಮಕ್ಕೆ ಬಂದು ನನ್ನನ್ನು ಹರಸಬೇಕು. ಈ ಸಂಕಲನದಲ್ಲಿರುವ ಕಥೆಗಳು ಪತ್ರಿಕೆಗಳಲ್ಲಿ ಪ್ರಕಟವಾದಾಗ ಅನೇಕರು ತಮ್ಮ ಅನಿಸಿಕೆ, ವಿಮರ್ಶಾತ್ಮಕ ಅಭಿಪ್ರಾಯಗಳನ್ನು ನೀಡಿ ಜೊತೆಯಾಗಿದ್ದೀರಿ. ಈ ಕಥೆಗಳ ಜಗತ್ತನ್ನು ಅನನ್ಯವಾಗಿ ಪೋಷಿಸಿರುವ ತಮ್ಮ ಪ್ರೀತಿ, ಅಭಿಮಾನ ನನ್ನ ದೊಡ್ಡ ಸಂಪತ್ತು. ನೀವೆಲ್ಲ ಪ್ರತ್ಯಕ್ಷವಾಗಿ ಬಂದು, ಕಾರ್ಯಕ್ರಮದಲ್ಲಿ ಪಾಲುಗೊಂಡು ಕನ್ನಡ ಪುಸ್ತಕೋದ್ಯಮವನ್ನು ಬೆಂಬಲಿಸಬೇಕು ಎಂದೂ ಈ ಸಂಕ್ರಮಣ ಕಾಲದಲ್ಲಿ ವಿಶೇಷವಾಗಿ ಅರಿಕೆ ಮಾಡಿಕೊಳ್ಳುತ್ತಿದ್ದೇನೆ.”
-ಚಿಂತಾಮಣಿ ಕೊಡ್ಲೆಕೆರೆ
ಆಮಂತ್ರಣ ಪತ್ರ ಕೆಳಗಿದೆ