ನೀನು ಒಮ್ಮೆಯಾದರೂ ನನ್ನನ್ನು ಪ್ರೀತಿಸಬಲ್ಲೆಯಾದರೆ ಹೇಳು ಮೌನಕ್ಕಿದು ಸಕಾಲವಲ್ಲ ಸದ್ದೇಮಾಡದ ಒಲವಿಗೆ ಕಿವಿಯಾಗುವುದು ಹೇಗೆ ಹೇಳು ಯಾವಾಗ ಬರೆದಿಟ್ಟೆ ಈ ಸಾಲುಗಳನ್ನು ನೆನಪಿಗೇ ಬರುತ್ತಿಲ್ಲ ನೋಡು ಅದಲುಬದಲಾಗಿಸಬಹುದೇ ಹೊಸತು-ಹಳತುಗಳನ್ನು! ಮೌನವನ್ನೇ ಆಲಿಸುತ್ತೇನೆ ಬಿಡು ಈಗಲಾದರೂ ಹೇಳು ಪ್ರೀತಿಸಬಲ್ಲೆಯಾ ಒಮ್ಮೆಯಾದರೂ? ಮನದ ಮಾತುಗಳು ಮುಗಿದುಹೋಗುವ ರೀತಿಗೂ ಒಂದು ಚೆಂದದ ಲಯವಿದೆ ಗೊತ್ತಿಲ್ಲ ನಿನಗೆ ಆರ್ತನಾದಕ್ಕೆ ಕೇಳುಗರು ಬೇಕಿಲ್ಲ ಒಂದು ನಗುವಿಗಾಗಿ ಪರಿತಪಿಸಿದ ಒಂದೇ ಒಂದು ಕನಸಿಗಾಗಿ ಕೈಯೊಡ್ಡಿದ ಸದ್ದುಮಾಡದ ಆಕ್ರಂದನವೂ ಮುಗಿದುಹೋಗುವ ಮುನ್ನ ಒಮ್ಮೆ ಪ್ರೀತಿಸಬಲ್ಲೆಯಾ ಹೇಳು ಸವಕಲೆನ್ನಲೇ ನಿನ್ನ! ಬಲಗೆನ್ನೆಯ ಅಂಚಲ್ಲೊಂದು ಸುಟ್ಟಕಲೆಯಿತ್ತು ಅದು ನಿನ್ನ ಕೆನ್ನೆಯೋ, ನನ್ನದೋ ಅಸ್ಪಷ್ಟ ನೆನಪುಗಳು ಬಹುಕಾಲ ಬಾಳುತ್ತವೆ ನೀನು ಆತುನಿಂತ ಆ ಬಣ್ಣಮಾಸಿದ ಮೋಟುಗೋಡೆಯುದ್ದಕ್ಕೂ ಚಾಚಿಕೊಂಡ ನಿನ್ನ ಕೈಬೆರಳುಗಳು ನನ್ನೊಳಗೂ ಹರಡಿಕೊಳ್ಳಲಿ ಆಸೆಗಳೆಲ್ಲ ಮಾಸಲಾಗುವ ಮುನ್ನ ಒಮ್ಮೆಯಾದರೂ ಪ್ರೀತಿಸಬಲ್ಲೆಯಾ ಹೇಳು ******
ಪ್ರೀತಿಸಬಲ್ಲೆಯಾದರೆ ಹೇಳು
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಅಂಜನಾ ಹೆಗಡೆ
ಅಂಜನಾ ಹೆಗಡೆ: ಹುಟ್ಟಿ ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನಲ್ಲಿ. ಮದುವೆಯಾಗಿ ಬೆಂಗಳೂರಿನಲ್ಲಿ ವಾಸ. ಹತ್ತು ವರ್ಷಗಳ ಕಾಲ ಬಿಪಿಓ ಒಂದರಲ್ಲಿ ಕೆಲಸ ಮಾಡಿದ ಅನುಭವ. "ಕಾಡ ಕತ್ತಲೆಯ ಮೌನಮಾತುಗಳು" ಕವನ ಸಂಕಲನ ಹಾಗೂ "ಬೊಗಸೆಯಲ್ಲೊಂದು ಹೂನಗೆ" ಪ್ರಬಂಧಗಳ ಸಂಕಲನ ಪ್ರಕಟವಾಗಿವೆ. ಓದು-ಬರೆಹದ ಜೊತೆಗೆ ಗಾರ್ಡನಿಂಗ್ ನೆಚ್ಚಿನ ಹವ್ಯಾಸ.
All Posts
3 thoughts on “ಪ್ರೀತಿಸಬಲ್ಲೆಯಾದರೆ ಹೇಳು”
sundaravada kavite
Kavithe khushi niditu
Super