ನಾವೆಲ್ಲರು ಕರ್ಣರು ಸರದಿಗಾಗಿ ಕಾದವರು ನಾವೆಲ್ಲರು ಕರ್ಣರೇ ಸೂತಪುತ್ರರು ಹುಟ್ಟಿನಿಂದ ಇಲ್ಲಿ ತನಕ ಮುಸುಕಿನ ಘನ ಮಬ್ಬಿನಲ್ಲಿ ತಡವಿ ತಡವಿ ಎಡವುತ್ತ, ಕುಲದ ಛಲದ ಬಲಕ್ಕಾಗಿ ಹಂಬಲಿಸಿ ಕಾದವರು, ನಾವು ಕರ್ಣರು ಕೊಲ್ಲುವವರು ಗೆಲ್ಲುವವರು ಸರದಿ ಮೀರಿ ಸಾಗುವವರು ಅವರ ಕೈಕೆಳಗೆ ನಾವು ಮೂಕರಾಗಿ ಮಣಿದು ನಿಂತು ಸರದಿ ಕಾಯುತಿರುವೆವು, ನಾವು ಕರ್ಣರು ಉಚ್ಛಕುಲದ ಮತ್ತಿನಲ್ಲಿ ಕೊಲ್ಲ ಬಂದು ಹಣಿಯ ಬಂದು ತುಚ್ಛರೆಂದು ನೀಚರೆಂದು ಹಣೆಪಟ್ಟಿಯ ಕಟ್ಟಿದರು ತಲೆತಗ್ಗಿಸಿ ಕಾದೆವು, ನಾವು ಕರ್ಣರು ನ್ಯಾಯಕೆ ನೀವಪ್ಪರಾಗಿ ಅನ್ಯಾಯಕೆ ನಾವ್ ಮಕ್ಕಳಾಗಿ ದೋಚಿ ಬಾಚಿ ರಾಡಿಹೂಡಿ ನೀವೆ ಯುಗದ ಜಟ್ಟಿಗಳು ನಾವು ಮಾತ್ರ ಇನ್ನು ಇಲ್ಲೆ ಸರದಿಗಾಗಿ ಕಾದೆವು ನಾವೆಲ್ಲರು ಕರ್ಣರು ಸೂತಪುತ್ರರು ********