ಆಸ್ತಿ ವಿಷಯ

ಜಗವ ಬದಲು ಮಾಡಬಹುದು
ನಮ್ಮ ಬದಲಿಸಿ!
ನಮ್ಮೊಳಗೇ ನಮ್ಮನೊಂದು
ಫೂಟು ಕದಲಿಸಿ!

ನಿಮ್ಮ ಜಾಗದಿಂದ ಕೊಂಚ
ಮುಂದೆ ಬಂದಿರಿ
‘ಒಂದು ಅಡಿ ಅಷ್ಟೆ ‘ ಎಂದು
ಅಂದುಕೊಂಡಿರಿ

ನೀವು ಅವರು ಬೇರೆ ಅಲ್ಲ
ಅಣ್ಣ ತಮ್ಮನೇ!
ಒಂದು ಅಡಿ ಭೂಮಿಗಾಗಿ
ಕದನ ಸುಮ್ಮನೇ!

ತಮ್ಮ ಕೂಗುತಿರುವನೀಗ
ಅಷ್ಟು ಭೂಮಿಗೆ!
ಎಷ್ಟು ಮಾತನಾಡಿದರೂ
ತಪ್ಪು ನಿಮ್ಮದೆ!

ಆಯಿತಪ್ಪ, ನಿಮ್ಮ ಜಾಗ
ಒಪ್ಪಿಕೊಳ್ಳುವ.
ಕೊಟ್ಟುಬಿಡಿ, ಮನದ ಶಾಂತಿ
ಉಳಿಸಿಕೊಳ್ಳುವ.

ಒಂದು ಫೂಟು ಗಡಿಯ ಬೇಲಿ
ಇತ್ತ ಕದಲಿಸಿ
ತೋಳನೆತ್ತಿ ನಿಲ್ಲಬೇಡಿ
ಮನಸು ಬದಲಿಸಿ!

ಸೂಜಿಮೊನೆಯ ಜಾಗ ಬಿಡೆ
ಸೊಕ್ಕಿ ನುಡಿದನು
ತೊಡೆ ಮುರಿದು ಆ ಮಣ್ಣಲೇ
ಸಂದುಹೋದನು

ಕಥೆಯ ಬದಲು ಮಾಡಬಹುದು
ನಮ್ಮ ಬದಲಿಸಿ!
ಸೂಜಿ ಮೊನೆ- ಅಷ್ಟಾದರೂ
ಛಲವ ಕದಲಿಸಿ!

*****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai