ಮುಂಬೈ : ಮುಂಬೈ ವಿಶ್ವವಿದ್ಯಾಲಯ ಕಳೆದ ಜೂನ್ ತಿಂಗಳಲ್ಲಿ ನಡೆಸಿದ ಎಂ.ಎ ಅಂತಿಮ ಪರೀಕ್ಷೆಯ ಫಲಿತಾಂಶಗಳು ಪ್ರಕಟವಾಗಿದ್ದು ಕನ್ನಡ ವಿಭಾಗದ ಪ್ರತಿಭಾ ರಾವ್ ಅವರು ಸರ್ವಾಧಿಕ ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ನೂತನ ಪಠ್ಯ ಕ್ರಮದಂತೆ ಪ್ರತಿಭಾ ರಾವ್ ಅವರು ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ.ಎನ್ ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ‘ ಶತಮಾನದ ಹಾದಿಯಲ್ಲಿ ಗೋಕುಲ’ ಹಾಗೂ ‘ಸುಧಾ ಮೂರ್ತಿ ಅವರ ಬದುಕು ಬರಹ’ ಎಂಬ ಎರಡು ಸಂಪ್ರಬಂಧಗಳನ್ನು ಮುಂಬೈ ವಿಶ್ವವಿದ್ಯಾನಿಲಯಕ್ಕೆ ಸಾದರ ಪಡೆಸಿರುತ್ತಾರೆ.
ಮೂಲತಃ ಮಂಗಳೂರಿನವರಾದ ಪ್ರತಿಭಾ ರಾವ್ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಇತ್ತೀಚೆಗೆ ಮುಂಬೈ ವಿಶ್ವವಿದ್ಯಾಲಯ ನಡೆಸಿದ ಪಿಹೆಚ್.ಡಿ ಪ್ರವೇಶ ಪರೀಕ್ಷೆಯಲ್ಲೂ ಇವರು ತೇರ್ಗಡೆ ಹೊಂದಿದ್ದಾರೆ.
ಪ್ರತಿಭಾ ರಾವ್ ಅವರು ಕರ್ನಾಟಕ ಬ್ಯಾಂಕಿನ ನಿವೃತ್ತ ಎ.ಜಿ.ಎಂ ಶ್ರೀನಿವಾಸ್ ಕೆ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ಉಷಾ ದೇವಿ ಅವರ ಪುತ್ರಿ ಹಾಗೂ ಮುಂಬೈಯ ಉದ್ಯಮಿಪತಿ ಶ್ರೀನಿವಾಸ್ ರಾವ್ ಅವರ ಪತ್ನಿ.
3 thoughts on “ಮುಂಬೈ ವಿ ವಿ ಕನ್ನಡ ಎಂ. ಎ ಫಲಿತಾಂಶ ಪ್ರಕಟ: ಪ್ರತಿಭಾ ರಾವ್ ಪ್ರಥಮ”
ಅಭಿನಂದನೆಗಳು ಪ್ರತಿಭಾ ರಾವ್ ಅವರಿಗೆ. ತಮ್ಮ ಪ್ರತಿಭೆ ತೋರಿಸಿಯೇ ಬಿಟ್ಟಿರಿ.💐💐🏆
ಹೀಗೆಯೇ ಮುಂದಿನ ಸಕಲ ಪ್ರಯತ್ನಗಳು ಯಶಸ್ಸು ಕಾಣುತಿರಲಿ.
ಹಠ ಅಂದರೆ ಹೀಗಿರಬೇಕು. ಸಾಧಿಸಿದರೆ ಸಬಳವನ್ನು ನುಂಗಬಹುದು ಎಂಬ ಗಾದೆ ಮಾತಿಗೆ ಬೇರೆ ಉದಾಹರಣೆ ಬೇಕೆ. ನಿನ್ನನ್ನು ಶ್ರೀ ದೇವರು ರಕ್ಷಿಸಲೆಂಬ ಪ್ರಾರ್ಥಿಸುತ್ತೇನೆ.
ಅಭಿನಂದನೆಗಳು