ಗಜಲ್

ಒಲವ ಹೊಳೆಯಲಿ ರಾಸಕ್ರೀಡೆ ಜೊತೆಯಾಗಿ ಆಡಲಿಲ್ಲ ಅವನು
ಹೃದಯ ಗೂಡಲಿ ಪ್ರೀತಿಯ ನಂದಾದೀಪ ಹಚ್ಚಲಿಲ್ಲ ಅವನು

ಕಲ್ಯಾಣ ಮಂಟಪದಲಿ ಬದಲಿಸಿದ ಸುಮ ಮಾಲೆಗಳು ಬಾಡಿವೆ
ಅನುರಾಗದ ಬದುಕಿಕೆ ಮುತ್ತಿನ ಹಾರವ  ಹಾಕಲಿಲ್ಲ ಅವನು

ಬಾನ ತಾರೆಗಳ ಎಣಿಸುತಾ ಮಲಗಿದೆ ಬಯಲ ಹೂ ಮಂಚದಲಿ
ಹುಣ್ಣಿಮೆಯ ಚಂದಿರನಾಗಿ ಎದೆ ಕಡಲು ಉಕ್ಕಿಸಲಿಲ್ಲ ಅವನು

ಸಾಂಗತ್ಯ ಬಯಸಿದ ತನು ಮನಗಳು ನರಳುತಿವೆ ಏಕಾಂತದಲಿ
ವಿರಹದ ತಾಪಕೆ ತಂಪಿನ ಚಂದನವ ಲೇಪಿಸಲಿಲ್ಲ ಅವನು

ಮಾಗಿದ ಸಿಹಿ ಹಣ್ಣು ತಿನಿಸಿದರೂ ಕಾಣದು ತೃಪ್ತಿಯ ಭಾವ
ಮನಸು ಅರಳಿಸುವ ಮೋಹದ ಪಿಸುಮಾತು ಆಡಲಿಲ್ಲ ಅವನು

ಕಿಟಕಿಯಿಂದ ತೂರಿಬಂದ ಬೆಳದಿಂಗಳು ಇಡುತಿದೆ ಕಚಗುಳಿ
ಮೌನದಿ ನಾಚಿ ಕಂದೀಲು ನಂದಿಸಿದ್ದು ತಿಳಿಯಲಿಲ್ಲ ಅವನು

ಮರಳುಗಾಡಿನಲಿ ಬಾಳ ಬಂಡಿಯ ಎಳೆದು ದಣಿದೆ " ಪ್ರಭೆ"
ಬಳಲಿದಾ ದೇಹಕ್ಕೆ ಒಲವಿನ ಸಿಹಿ ನೀರು ಕುಡಿಸಲಿಲ್ಲ ಅವನು



* ಪ್ರಭಾವತಿ ಎಸ್ ದೇಸಾಯಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಗಜಲ್”

  1. ಬಾಗೇಪಲ್ಲಿ ಕೃಷ ಮೂರ್ತಿ

    ಈ ಗಜಲನ್ನು ನಾನು ಓದಿದ್ದೆ. ಹಾಗಾಗಿ ಇಲ್ಲಿ ಓದಲು ಪ್ರಾರಂಭಿಸಿದಾಲೇ ಮುಂದೆ ಚಂದ್ರಮನ ಬೆಳದಿಂಗಳ ಕಚಗುಳಿ ಬಳಲಿದ ದೇಹ ನೀರಿನ ಕೊರತೆ ನೆನಪಾಯಿತು. ಇದೇ ಅಲ್ಲವೆ ಫಕ್ಕಾ ಗಜಲಿನ ಶಕ್ತಿ.
    ನನ್ನ ಯಾವುದಾದರೊಂದು ಗಜಲ್ ಯಾರಾದರೂ ಒಬ್ಬ ಓದುಗನಿಗೆ ಈ ಪರಿ ಅನುಭವವಾಗಿ ನನ್ನ ಧನ್ಯನಾಗುವ ಬಯಕೆ ಇದೆ ನನ್ನಲಿ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter