ಈ ಕಾಲಕಾದರೂ ಸ್ವರ ಬದಲಿಸಬಹುದೆಂದುಕೊಂಡಿದ್ದೆ; ಊರೂರು ಅಲೆದಾಟದಲ್ಲೂ ಅದನೇ ಕಾದೆ. ಸ್ವರ ಬದಲಾಯಿಸಲೇ ಇಲ್ಲ ಅದು. ನಿಮಿಷ ನಿಮಿಷಕ್ಕೂ ಅದಲು ಬದಲು ಕಂಚಿ ಕದಲು ಆಹಾರವಿಹಾರಗಳೆಲ್ಲ ಬದಲು ಸರಕಾರ ಬದಲು ಆಶ್ವಾಸನೆಗಳೂ ಬದಲು. ಕೋಗಿಲೆ ಮಾತ್ರ ಬದಲಾಗಲೇ ಇಲ್ಲ! ಯಾರಬಾಯಲ್ಲಿ ಯಾವ ಸಪ್ತಸ್ವರ ಹೇಗೆ ಹೊರಟರೂ ಅಷ್ಟೆ; ರಾಗ ತಾಳ ಲಯ ಅದೇ... ಹಾಡೂ ಅದೇ... ಸಹಸ್ರಮಾನದ ಪಂಪನ 'ಕುಕಿಲ್ವ ಕೋಗಿಲೆ' ದ್ವಿಸಹಸ್ರಮಾನದಲ್ಲೂ ಅದೇ. ಬದಲಾಗಲಿಲ್ಲ ಅದು. ಅಂತೆ- ಬದಲಾಗದವರ ಹಾಡು ನಾವು. ********
3 thoughts on “ಭಾವಗೀತೆ”
ಕಾಲ ಬದಲಾದರೂ ಮನುಷ್ಯ ಸ್ವಭಾವ ಬದಲಾಗದು! ಒಳ್ಳೆಯ ಕವನ.
ಕವಿತೆ ಚನ್ನಾಗಿದೆ
ಉತ್ತಮ ಕವನ