ಇಷ್ಟು ಸಾಲದೇ ಗುರುವೇ

ಬಾಳ ಹೊಸಿಲಲಿ ಹೊಸದನರಿಯಲು
ದಾರಿ ತೋರಿದ ಗುರುಗಳೇ
ನಮ್ಮ ಹರಸಿರಿ ಪೂಜ್ಯರೇ

ಕಲಿತ ಪಾಠವು ಮಾಗಿ
ಸತ್ಯ ಪಥದಲಿ ಸಾಗಿ
ದಿಟ್ಟ ನಿಲುವಲಿ ನಿಲಲು
ಸ್ಥಿರತೆ ಬೇಕಿದೆ ಗುರುವೇ

ಇರುಳು ಬೆಳಕಲಿ ಬದುಕು
ತಿರುಗಿ ಸಾಗಲೇ ಬೇಕು
ಕೂಡಿ ಬಾಳುವ ಕಲೆಗೆ
ಸಮತೆ ಬೇಕಿದೆ ಗುರುವೇ

ಸಹನೆ ಕರುಣೆಯ ಬೀಜ
ಎದೆಯ ನೆಲದಲಿ ಬಿರಿದು
ಚಿಗುರು ಹೂವಿನ ಸೆಳೆಗೆ
ಬಣ್ಣ ಬೇಕಿದೆ ಗುರುವೇ

ಒಂದು ನೇಮದ ನಡಿಗೆ
ಸುಮನ ಸ್ನೇಹದ ಬೆಸುಗೆ
ಸರಳ ಜೀವನ ಪಥಕೆ
🙏ಇಷ್ಟು ಸಾಲದೇ ಗುರುವೇ 🙏

*ಅನಿತಾ ಪಿ.  ತಾಕೊಡೆ*

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಇಷ್ಟು ಸಾಲದೇ ಗುರುವೇ”

  1. Adv R.M. Bhandari, Mumbai

    “ಇಷ್ಟು ಸಾಲದೇ ಗುರುಗಳೇ ”
    ಇದು ಗುರುಗಳಿಗೆ ಸಂದ ನಿಜವಾದ ಗುರು ದಕ್ಷಿಣೆ. ಶಿಕ್ಷಕರ ದಿನದಂದು ಸಮೋಯೋಚ್ನೆತವಾಗಿ ಕವಿತೆ ರಚಿಸಿದ್ದೀರಾ ಅನಿತರವರೆ. ಅಭಿನಂದನೆಗಳು 😊👍👍
    ನ್ಯಾ. ಆರ್. ಎಂ. ಭಂಡಾರಿ, ಮುಂಬೈ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter