ಭಾರತಕ್ಕೆ ಸ್ವಾತಂತ್ರ ತಂದುಕೊಟ್ಟ ದಾತ ನಿನ್ನನ್ನು “ತಾತ” ಎಂದು ಕರೆದದ್ದು ಆತ್ಮೀಯತೆಗೋ? ಇಲ್ಲ ಸಲುಗೆ ಇರಲೆಂದೋ? ನಿನ್ನ ಸರಳ ಜೀವನದ ಅಣಕು ಸಿನೇಮಾ ಥಿಯೇಟರುಗಳ ”ಗಾಂಧಿ” ಕ್ಲಾಸಿನಲ್ಲಿ ಸತ್ಯ ಸಂಧತೆಯ ನಿನ್ನ ಹೆಸರಿನ ಟೋಪಿಯಡಿ ಮೋಸ ವಂಚನೆಯ ತಂತ್ರ; ಬ್ರಿಟಿಷ್ ಶಾಹಿಯನು ನಡುಗಿಸಿದ ನಿನ್ನ ‘ಸತ್ಯಾಗ್ರಹ ‘ಮಾತು ಮಾತಿನ ಅಣಕ ಪಟ್ಟ ಪದವಿಯ ತೊರೆದ ನಿನ್ನ ಹೆಸರಿನಲಿ ಕುರ್ಚಿಗಾಗಿ ಕಚ್ಚಾಟ ; ಸ್ವಾರ್ಥ ತುಂಬಿದ ಕೂಟ; ಸ್ವಾತಂತ್ರದ ಸಿಹಿಯುಣ್ಣಿಸಿದ ನಿನಗೆ ಸಿಕ್ಕದ್ದು ಸಿಡಿ ಗುಂಡಿನ ರುಚಿ; “ಇನ್ನಿನಿಸು ನೀ ಬದುಕಬೇಕಿತ್ತು, ಮತ್ತೊಮ್ಮೆ ನೀ ಬರಬಾರದೆ?” ಇತ್ಯಾದಿ ಕವಿವಾಣಿಗಳಿಗೆ ಬೆರಗಾಗಿ ಮರುಳಾಗಿ ಬಂದು ಸ್ವಾರ್ಥ ವಂಚನೆ ವಿಷವರ್ತುಲಗಳಲಿ ಸಿಲುಕಿ ನೀನೂ ಬದಲಾಗಿ ಬಿಡುತ್ತೀಯೋ? ಸೀಟಿಗಾಗಿ, ಓಟಿಗಾಗಿ ಬೇಟೆಯಾಡಿ ಅಲೆದಾಡುವೆಯೋ ಇಲ್ಲಾ ನೀ ಕಟ್ಟಿದ ಸುಂದರ ಭಾರತದ ಇಂದಿನೀ ಸ್ಥಿತಿಗೆ ಹೆದರಿ ಹೃದಯ ಒಡೆದು ಸಾಯುವೆಯೋ? ಅದೇ ಹೆದರಿಕೆ ನನ್ನಿಂದ ನುಡಿಸುತಿದೆ ಓ ಶಾಂತಿದೂತ ಮತ್ತೆ ಬರಲೇ ಬೇಡ ಬರಲೇ ಬೇಡ ಬರಲೇ ಬೇಡ ಬಾಪು!!!!! *ಡಾ ಸತ್ಯವತಿ ಮೂರ್ತಿ
ಮತ್ತೆ ಬರಲೇ ಬೇಡ ಬಾಪು
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಸತ್ಯವತಿ ಮೂರ್ತಿ ,ಇಂಗ್ಲೆಂಡ್
ಡಾ ಸತ್ಯವತಿ ಮೂರ್ತಿ.ಮ್ಯಾಂಚೆಸ್ಟರ್ , ಇಂಗ್ಲೆಂಡ್,B.Sc, B.A, M.A, B Ed.
ಬರಹಗಾರ್ತಿ, ಬೆಂಗಳೂರು ದೂರದರ್ಶನ ಹಾಗೂ ಆಕಾಶವಾಣಿ ಕಲಾವಿದೆ, ಇವರ ಪಿ.ಎಚ್.ಡಿ ಯ ನಿಬಂಧವೂ ಸೇರಿದಂತೆ 4 ಪುಸ್ತಕಗಳು ಪ್ರಕಟಗೊಂಡಿವೆ. ಸುಮಾರು 25 ವರ್ಷಗಳಿಂದ ಮ್ಯಂಚಸ್ಟರ್ ನಲ್ಲಿ ನೆಲೆಸಿದ್ದಾರೆ. ಇವರ ಬರಹ , ಕವನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹಲವಾರು ಕವಿತೆ ಹಾಗೂ ನಾಟಕಗಳು ಬಹುಮಾನಗಳಿಸಿವೆ . ’ರೆಫ಼ೆರೆನ್ಸ್ ಏಷ್ಯಾ’ ಮೆನ್ ಅಂಡ್ ವಿಮೆನ್ ಆಫ಼್ ಅಛೀವ್ಮೆಂಟ್ಸ್ ನಲ್ಲಿ ಇವರ ಹೆಸರು ಉಕ್ತವಾಗಿದೆ.ಇಂಗ್ಲಿಂಡಿನಲ್ಲೂ ಕನ್ನಡ ಬಳಗ, ವೀರಶೈವ ಸಂಘ, ಮೆಟಫಿಸಿಕಲ್ ಸೊಸೈಟಿ , ಕಲಾ ಸಂಗಮ ಮೊದಲಾದ ಕಡೆಗಳಲ್ಲಿ ಇವರು ವಿವಿಧ ವಿಷಯಗಳನ್ನು ಕುರಿತು ಮಾತನಾಡಿ ಜನಮನವನ್ನು ಗೆದ್ದಿದ್ದಾರೆ. ಇಂಗ್ಲೆಂಡ್ ಸಕಾರದಿಂದ ’ ಹಿಂದೂ ಪ್ರಿಸನ್ ಮಿನಿಸ್ಟರ್’ ಆಗಿ ನೇಮಕಗೊಂಡಿದ್ದರು ಇತ್ತೀಚೆಗೆ ಕಂಪೆನಿಯೊಂದರ ಕಾರ್ಯಕರ್ತರಾಗಿ ನಿವೃತ್ತರಾದ ಇವರು , ಇಲ್ಲಿಯ ಮಕ್ಕಳಲ್ಲಿ ನಮ್ಮ ಸಂಸೃತಿಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ
All Posts
2 thoughts on “ಮತ್ತೆ ಬರಲೇ ಬೇಡ ಬಾಪು”
Pinching vidambane
.helida reetiyalli khedavide….
Thank you vishvanath nimma anisikegaligagi