ಎನಿತು ಪುಣ್ಯಭೂಮಿ ನಿನದು ಭಾರತ ಮಾತೆ/ ಕನಕದಕ್ಷರಗಳ ಚರಿತೆ// ತುಹಿನಾದ್ರಿಯ ಶಿಖರದಲ್ಲೂ ಸಾಧು, ಸಂತರ ಜ್ಞಾನ ಹೊಂಗಿರಣ/ ಪರಮ ಪಾವನೆ ಗಂಗೆ ನಿನ್ನ ಆಭರಣ// ಮಹಾಕಾವ್ಯಗಳು ನಿನ್ನ ನಗೆಯೊಳಡಗಿದೆ/ ನಿನ್ನ ಉಸಿರಿನಲ್ಲೇ ಮಂತ್ರಘೋಷ ಮೊಳಗಿದೆ// ನಿನ್ನ ಕಿರು ನಿದಿರೆಯ ಮಧುರ ಸ್ವಪ್ನ ಇಲ್ಲಿಯ ಕಲೆಗಳು/ ನಿನ್ನ ಕಣ್ಣ ಸಹನೆಯೇ ಬೆಳದಿಂಗಳು// *ಹರ್ಷವರ್ಧನ ಹೆಗಡೆ ನಿಟ್ಟೂರು