ಮರದ ಕುರಿತು

ಮರೆಯಬೇಕೆಂದಷ್ಟೂ ನೆನಪಾಗಿ
ಕಾಡುವವನ ಮರೆಯಲೆಂದೆ
ಮರವೊಂದನ್ನು ಪ್ರೀತಿಯಿಂದ
ನೆಟ್ಟೆ.
ಆದರೀಗ ಮರವೇ
ಮನದಿನಿಯನಾಗಿ ಅದರೆದೆಗೆ
ಒರಗಿಬಿಟ್ಟೆ.
*************
ಮರದ ಮೋಹಕ್ಕೆ ಬೀಳಬೇಡ
ಮೆರವಣಿಗೆ ಇಲ್ಲದ ಬದುಕು
ಏಕಾಂಗಿ ಧ್ಯಾನ
ಅಂತೆಲ್ಲ ಕೊರೆದರು
ನದಿಯನ್ನೇ ನೆಚ್ಚಿದ ಜನ
ಊರುಕೊಚ್ಚಿ ಹೋದರೂ
ಮರ ನಿಂತಲ್ಲೇ ಇತ್ತು
ಆಗಸವನ್ನೇ ಕಣ್ಣಲ್ಲಿ ಹೊತ್ತು
ಅದಕ್ಕೆ ಮರವೆಂದರೆ
ನನಗೆ ವಿಪರೀತ ಮತ್ತು.
*****************
ಮರದ ಜೊತೆ ಸ್ನೇಹ
ಮಾಡಿದೆ
ಎಲೆಗಳ ಸೆರಗ ಹಾಸಿ
ಗಳಿಗೆಗಳಿಗೆಯೂ
ನನ್ನ ತಬ್ಬುತ್ತಲೇ ಹೋಯಿತು.
ಮರುಗಳಿಗೆ
ನಾನು ಮಾರುತವಾದೆ
*******************
ಮರದಂತೆ ಇರುವವನೇ
ಮಾರನಂತೆ ಬದಲಾದ
ಮಾರುತ್ತರವೇ ಕೊಡದೇ
ಮರಮರ ಮರಗುತ್ತಾ
ನಾನೇ ಮರಗಟ್ಟಿದೆ.
*****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

6 thoughts on “ಮರದ ಕುರಿತು”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter