ಆಮ್ಲಜನಕ
ಈ ಭೂಮಿಯ ಜನಕ ನೀಡು ಆಮ್ಲಜನಕ ಬೋಳು ಬಯಲಿನಲ್ಲಿ ಬಾಳು ಬೇಯಿತಿಲ್ಲಿ! ಪ್ರಾಣವಾಯುಗಾಗಿ ಪರಿತಪಿಸುವ ರೋಗಿ! ಮತ್ತೆ ಸಿಲಿಂಡರಲಿ ಆಮ್ಲಜನಕ ಬರಲಿ! ಬಯಸಿ ಬಯಸಿ ಪ್ರಾಣ ಕುಸಿಯುತ್ತಿದೆ ತ್ರಾಣ! ಕಂಗೆಡಿಸಿದೆ ಜಂತು ಪ್ರಕೃತಿ ಮುನಿದು ನಿಂತು! ಮನುಕುಲವನ್ನುಳಿಸಿ! ದೇವತೆಗಳೆ ಕ್ಷಮಿಸಿ! ಉಸಿರು ಕೊಟ್ಟುಇಂದೆ ಕಾಪಾಡಿರಿ ತಂದೆ ****** ಕಣ್ಣಿಗೆ ಕಾಣದ ವೈರಾಣು ಕಣ್ಣಿಗೆ ಕಾಣದ ವೈರಾಣು ನಿನಗೆ ನಾವೇನು ಹೇಳೋಣು! ಕೊರೋನಾ ಎಂಬುದು ಹೆಸರೋ! ವಿಪತ್ತಿನಿನ್ನೊಂದು ಬಸಿರೋ! ದಿಗ್ದಿಗಂತಗಳ ಮೀರಿ ವಿಶ್ವದಎಲ್ಲೆಡೆ ಹಾರಿ ಕಣ್ಣಿಗೆಕಾಣದೆ ನೀನು ಆಡಿದ ಆಟಗಳೇನು! ದೊಡ್ಡ ದೇಶಗಳೂ ಸೋತು ಮಂಡಿಯೂರಿದವು ಕೂತು ಮೂಗು ಬಾಯಿಗಳ ಮುಚ್ಚಿ ನಮ್ಮನು ಅಣಕಿಸಿ ನಕ್ಕಿ ನರರ ತಾಕತ್ತು ಅಳೆದೆ ಸಾವಿನ ಮನೆಗೂ ಎಳೆದೆ ಲಕ್ಷಗಟ್ಟಲೆ ಪ್ರಾಣ ನಿನಗಾದವು ಬಲಿದಾನ ಬಳಲಿಸಿ ಮಾಗಿಸಿ ನೀನು ಕಲಿಸಿದ ಪಾಠಗಳೇನು! ಧನಿಕರು ಬಡವರು ಒಂದೇ ಹಳ್ಳಿ ನಗರ ಒಂದೇ ಎಲ್ಲ ಜಾತಿಗಳು ಒಂದೇ ಎಲ್ಲ ಮತಗಳೂ ಒಂದೇ ಎಲ್ಲ ದೇಶಗಳೂ ಒಂದೇ ಎಲ್ಲ ಖಂಡಗಳೂ ಒಂದೇ ಮೌನದಿ ತಿವಿದು ತಿದ್ದಿ ಕಲಿಸಿದಿ ತ್ರಿಕರಣಶುದ್ಧಿ ಕಣ್ಣಿಗೆ ಕಾಣದ ವೈರಾಣು, ವಂದಿಸಿ ಮುಂದಕೆ ಹೋಗೋಣು! • ಚಿಂತಾಮಣಿ ಕೊಡ್ಲೆಕೆರೆ
2 thoughts on “ಕೊರೋನಾ ಎರಡು ಪದ್ಯಗಳು”
Nice ones
Superb