ಅದು ಬಿಳಿಯಾದ ಬೆಳ್ಳಿ ಗೆಜ್ಜೆ ಯ ಆಸೆಯಕಥೆ ನಮ್ಮೂರ ಜಾತ್ರೆಗೆ ಹೋದಾಗ ಪುಟ್ಟ ಅಂಗಡಿಯ ಮುಂದೆ ನಿಂತು ಕಣ್ಣ್ ತುಂಬಿ ಕೊಂಡಿದ್ದೆ ಕೈ ತೋರಿಸಿದಾಗ ಕೊಳ್ಳಲು ಅಂದು ಬಡತನ ಅಡ್ಡಿಯಾಯಿತು ಇಂದಿಗೆ ಕಾಲ ವೆಷ್ಟೋ ಸಂದಿತು ಆ ಆಸೆ ಮಾತ್ರ ಸವೆಯಲಿಲ್ಲ ಒಮ್ಮೆ ಗೆಳತಿಯ ಗೆಜ್ಜೆ ತೊಟ್ಟು ಕಾಲನ್ನು ನೆಲದ ಮೇಲಿಡುವ ಮನಸ್ಸಾಗದೆ ಅವ್ವನ ಮಡಿಲೇರಿಯೆ ಕುಳಿತಿದ್ದೆ ಒಮ್ಮೆ ನನ್ನವರಲ್ಲಿ ನನ್ನ ಕೋಮಲ ವಾದ ಕಾಲುಗಳನ್ನು ಮುಂದಿಟ್ಟು ಗೆಜ್ಜೆ ಕೊಡಿಸುವಿರಾ ಎಂದು ಕೇಳಿದ್ದೆ ನೀನೇನು ಮಗುವೇ ಗೆಜ್ಜೆ ತೊಡಲು ಎಂದು ಚೇಡಿಸಿದಾಗ . ನನ್ನ ಮನಸು ಹೃದಯವೆರಡು ಮುದುಡಿ ಕೊಂಡಿತ್ತು ನನ್ನ ಕಾಲು ಯಾವುದ್ಯಾವುದೋ ಏರು ತಗ್ಗುಗಳಲ್ಲಿ ಸವೆದು ಸುಕ್ಕು ಗಟ್ಟಿದೆ ಇಂದು ಕಾಲಲ್ಲಿ ಬಲವಿಲ್ಲವಾದರೂ ನನ್ನವನ ಅಂಗಡಿಯ ಗಾಜಿನ ಹಿಂದೆ ನೇತಾಡುವ ಬೆಳ್ಳಿ ಗೆಜ್ಜೆ ಯನ್ನು ಕಣ್ತುಂಬಿ ಕೊಳ್ಳುತ್ತೇನೆ ನನ್ನ ಪುಟ್ಟ ಮೊಮ್ಮಗಳ ಕಾಲಲ್ಲಿ ಅವಳಿಟ್ಟ ಹೆಜ್ಜೆಯಷ್ಟೆ ಸದ್ದು ಮಾಡುವ ಗೆಜ್ಜೆ ಕಾಲನಷ್ಟೇ ಬದಲಾಯಿಸಿತು ಹೊರತು ಕಾಲವನಲ್ಲ *ಲಕ್ಷ್ಮಿ ರಾಜೀವ್ ಹೇರೂರು
ಬೆಳ್ಳಿ ಗೆಜ್ಜೆ
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಲಕ್ಷ್ಮೀ ರಾಜೀವ ಹೇರೂರು
ಲಕ್ಷ್ಮೀ ರಾಜೀವ್ ಹೇರೂರು ಅವರ ಹುಟ್ಟೂರು ಬ್ರಹ್ಮಾವರದ ಹತ್ತಿರದ ಹೇರೂರು, ಈಗ ಮುಂಬೈಯಲ್ಲಿ ವಾಸ. ಬ್ರಹ್ಮಾವರ ಮಣಿಪಾಲದಲ್ಲಿ ಬಿ. ಎ. ಬಿ. ಎಡ್ ಪದವಿ ಮುಗಿಸಿ ಇತ್ತೀಚಿಗೆ ಮುಂಬೈ ವಿಶ್ವವಿದ್ಯಾಲಯದಿಂದ ಎಂ. ಎ ಪದವಿ ಪಡೆದಿದ್ದಾರೆ . ಒಂದು ಕಥಾ ಸಂಕಲನ ಬೆಳಕು ಕಂಡಿದೆ. ಲೇಖನ ಗಳು , ಕಥೆಗಳು ಕವನಗಳು ಹಲವು ಪತ್ರಿಕೆ ಗಳಲ್ಲಿ ಬೆಳಕು ಕಂಡಿವೆ.
All Posts
6 thoughts on “ಬೆಳ್ಳಿ ಗೆಜ್ಜೆ”
ತುಂಬಾ ಚೆನ್ನಾಗಿದೆ ಕವನ ಲಕ್ಷ್ಮೀ ಯಾವುದೆ,
ಕೈಗೂಡದ ಬಾಲ್ಯದ ಆಸೆ,ದಮನಿತ ಆಸೆ ಬದುಕಿನುದ್ದಕೂ ಧುತ್ತನೆ ಎದುರಾಗುತ್ತ ಕಾಡುತ್ತದೆ. ಈ ಬದುಕು ಅಪೂರ್ಣ ಎಂಬುದನ್ನು ನೆನಪಿಸುತ್ತದೆ.ಅದುಮಿ ಹಿಡಿದ ಗೆಜ್ಜೆ ತೊಡುವ ಆಸೆ ಸರಳ ಆದರೆ ಮಾರ್ಮಿಕ ಕವಿತೆಯಾಗಿ ಮೂಡಿದೆ.ಎಲ್ಲರ ಎದೆಯನ್ನು ಜಗ್ಗಿ ಬಚ್ಚಿಟ್ಟ ಆಸೆಗಳು ಮನದಂಗಳದಲ್ಲಿ ಬಿಚ್ಚಿಕೊಳ್ಳುವಂತೆ ಮಾಡಿದೆ. ಕವಯತ್ರಿಗೆ ಶುಭ ಹಾರೈಕೆಗಳು
ತುಂಬಾ ಮಾರ್ಮಿಕವಾಗಿ ಹೃದಯದ ಅಂತರಾಳದ ನೋವು ಮತ್ತು ಕಾಲದ ಬಗ್ಗೆ ತುಂಬಾ ಚೆನ್ನಾಗಿ ಕವಿತೆ ಮೂಡಿ ಬಂದಿದೆ.👍 .ತುಂಬು ಹೃದಯದ ಧನ್ಯವಾದಗಳು .❤💓❤👍👍✌✌
ಭಾವಪೂರ್ಣ ಕವನ
ಚೆನ್ನಾಗಿ ಮೂಡಿ ಬಂದಿದೆ
ಪದಗಳ ಬಳಕೆ ಪ್ರಾಸ ಬದ್ಧತೆ ಭಾವ ಶ್ರೀಮಂತಿಕೆಗಳಿಂದ ಸೊಗಸಾಗಿದೆ
ಥ್ಯಾಂಕ್ಸ್ ಸುಧಾ ಮೇಡಂ
ಗೆಜ್ಜೆ ಕಾಲನಷ್ಟೇ ಬದಲಾಯಿಸಿತು ಹೊರತು ಕಾಲವನಲ್ಲ. ಎಂತಹ ಅದ್ಭುತ ವಾಕ್ಯದಿಂದ ಕೊನೆಗೊಂಡಿತು ಕವನ… ಅಭಿನಂದನೆಗಳು ಕವಯತ್ರಿಗೆ.