ಸಾಗುತ್ತಿದ್ದೇವೆ ಅತಂತ್ರದ ಹಾದಿಯಲಿ ಮನಸು, ದೇಹವ ಒತ್ತೆಯಿಟ್ಟು ದೂರದಲ್ಲೆಲ್ಲೋ ಇರುವ ಗುರಿ ಎಂಬ ಭ್ರಮೆಯ ಸೇರಲು ಅಸ್ಪಷ್ಟ, ಗೊಂದಲ, ಅದೃಶ್ಯ ರೂಪಗಳ ಜೊತೆ ಸೋತ ಕಂಗಳ ಕಾಂತಿಯ ವ್ಯಥೆ, ಹಿಡಿದ ಕೈಗಳು ಬಿಡುವುದಿಲ್ಲ ಎಂದು ನಂಬಿ ಮುಖವಾಡದಿಂದಿನ ಮುಗುಳನಗೆಯ ನೋಡದೆ ಕಾಲು ಸೋತು ಬಸವಳಿದರೂ ಸಾಗುತ್ತಿದ್ದೇವೆ ಒಂದು ಕ್ಷಣ, ಪಳಕ್ಕನೆ ಮಿಂಚುವ ಬೆಳಕಿಗೆ ಫೋಸುಕೊಟ್ಟು, ಸುಖ ಅನುಭವಿಸುವುದು "ಆಹಾ ಎನಿತು ಸುಂದರ ಜೀವನ ಪ್ರಕೃತಿಯಡಿಯಲ್ಲಿ" ಎಂದು ಮಿಂದ್ದೆದ್ದು ದೈವತ್ವವ ಸುಖಿಸುವುದು ಉತ್ಸಾದಿ ಕುಣಿದು, ಹತ್ತಿರದವರಲಿ ಅಸೂಯೆ ತುಂಬುವುದು ಚಲಿಸುತ್ತಲೇ ಇರುತ್ತವೆ ಸಕಲವೂ ಒಂದೇ ಗುರಿ ಸಕಲಕೆ, ಹೊರಟಲ್ಲಿಗೆ ಬಂದು ಸೇರುವುದು ನಮ್ಮ ಗುರಿ ಊರ್ಧ್ವಮುಖಿಯಾಗಿ ಅನಂತತೆಗೆ ಹಪಹಪಿಸಿ ಅದೃಶ್ಯವಾಗುವುದು ದೇಹವಿರದ ಆತ್ಮವ ನಂಬಿ ಸಾಗುತ್ತಲೇ ಇರುವುದು ಸಾಗಲೇಬೇಕು ಸಾಗರ ಸೇರುವ ನದಿಯ ತೆರೆದಿ ಎಲ್ಲವನೂ ಜಯಸಿ, ಎಲ್ಲರನೂ ಸೇರಿಸಿಕೊಂಡು ಅಗಾಧದ ಅವಕಾಶಕೆ ಇರುವಿಕೆ ಪ್ರಕಟಗೊಳ್ಳುತ್ತಲೇ ಇರುತ್ತದೆ ಸಂಗಮದ ನಂತರವೂ * ಎಂ.ವಿ. ಶಶಿಭೂಷಣ ರಾಜು
