ಹೋಳಿ ಎರಚುತ್ತಾರೆ ಅವರು ಕಾಮನ ಹುಣ್ಣಿಮೆಯಲ್ಲಿ ಹಾಲು ಉಕ್ಕಿದ ಹಾಗೆ ಚಂದ್ರ ಚೆಲ್ಲುವರಿದಿದ್ದಾನೆ ಬೀದಿಯಲ್ಲಿ. ಎತ್ತರ ಹದಿನಾರು ಬಿಲ್ಲು ತಿದ್ದಿ ತೀಡಿದ ಹುಬ್ಬು ಕಣ್ಣು ಕುದಿಯುವ ಕುಲುಮೆ ಗುಂಪು ಕೂಗುತ್ತಿದೆ ಉಘೇ ಉಘೇ ಬಣ್ಣ ಬೀರುತ್ತಿದ್ದಾರೆ ಹೃದಯದಲ್ಲಿ ಉರಿಯುತ್ತಿದೆ ಹರೆಯ ರಸ್ತೆಯಲ್ಲಿ ಕಿಟಿಕಿ ಕಣ್ಣುಗಳಲ್ಲಿ ಸ್ಫುರಿಸುತ್ತಿರುವ ಕನಸುಗಳು ಧುಮುಗುಡುವ ರಾಗಗಳು ಎದೆಯ ಓಕುಳಿಯಲ್ಲಿ ಮೌನದಾರ್ಭಟಗಳು ಕಡುಕೆಂಪು ಬೆಂಕಿ ನುಗ್ಗುತ್ತದೆ ಪ್ರತಿಮನೆಗೆ ಪಿಸುಗುಡುತ್ತದೆ ರಾತ್ರಿ ಮಾತು ಹೂತಂತೆ ಹೊಕ್ಕುಳಲ್ಲಿ ಮೆರೆಯುತ್ತಾಳೆ ರತಿ ಏಳುತ್ತಾನೆ ಶಿವ ಹೇಳುತ್ತಾನೆ ಚಂದ್ರ ಪ್ರಿಯೆ ಬಾರೇ ಹಾಲು ಬೆಳದಿಂಗಳಲ್ಲಿ ರಂಗುರಂಗಿನ ಹೋಳಿ ಎದೆ ಬಗೆದು ಚಂದ್ರ ಕರೆಯುತ್ತಾನೆ ಪ್ರಿಯೆ ಬಾರೇ.. *-ಡಾ. ವಸಂತಕುಮಾರ ಪೆರ್ಲ*
ಕಾಮನ ಹುಣ್ಣಿಮೆ
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಡಾ. ವಸಂತಕುಮಾರ ಪೆರ್ಲ
ಕಾವ್ಯ ಕಥೆ ಕಾದಂಬರಿ ವಿಮರ್ಶೆ ಸಂಶೋಧನೆ ಸಂಪಾದನೆ ವ್ಯಕ್ತಿಚಿತ್ರ ಅಂಕಣ ಚಾರಣ ಪ್ರವಾಸ ಅನುವಾದ ಮುಂತಾಗಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಐವತ್ತಕ್ಕಿಂತ ಹೆಚ್ಚು ಕೃತಿರಚನೆ ಮಾಡಿರುವ ಡಾ. ವಸಂತಕುಮಾರ ಪೆರ್ಲ ಅವರು ಸಾಹಿತ್ಯ ಮಾತ್ರವೇ ಅಲ್ಲದೆ ಸಮೂಹ ಮಾಧ್ಯಮ, ರಂಗಭೂಮಿ, ಸಿನಿಮಾ, ಸಂಘಟನೆ, ಸಮಾಜಸೇವೆ ಮೊದಲಾದ ಇತರ ಕ್ಷೇತ್ರಗಳಲ್ಲಿಯೂ ತನ್ನನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಂಡವರು. ಭಾಷೆ, ವ್ಯಾಕರಣ, ಕಾವ್ಯಮೀಮಾಂಸೆ, ಸಂಸ್ಕೃತಿ ಅಧ್ಯಯನ ಮೊದಲಾದವು ಡಾ. ಪೆರ್ಲರ ಆಸಕ್ತಿಯ ಕ್ಷೇತ್ರಗಳು. ಇವರ ಕಥೆ ಕವನಗಳು ತುಳು ಕೊಂಕಣಿ ಮಲಯಾಳಂ ತಮಿಳು ತೆಲುಗು ಹಿಂದಿ ಪಂಜಾಬಿ ನೇಪಾಳಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಅನುವಾದ ಆಗಿವೆ. ಇತ್ತೀಚೆಗೆ ಅವರ ‘ವಿಷ್ಣುಮಂಗಲ’ ಎಂಬ ಇಂಗ್ಲಿಷ್ ಕಥಾಸಂಕಲನ (ಅವರದೇ ಸಣ್ಣಕಥೆಗಳ ಅನುವಾದ) ಪ್ರಕಟವಾಗಿ ಹೆಸರಾಗಿದೆ. ರಂಗಭೂಮಿ ಬಗ್ಗೆ ಡಾಕ್ಟೊರೇಟ್ ಅಧ್ಯಯನ ಮಾಡಿದ್ದಾರೆ. ಆಕಾಶವಾಣಿಯ ಹಲವು ಕೇಂದ್ರಗಳಲ್ಲಿ ಸುಮಾರು ಮೂವತ್ತು ವರ್ಷ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿದ್ದಾರೆ.
ಸುಮಾರು ಇಪ್ಪತ್ತಕ್ಕಿಂತ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಇವರು ಸರಕಾರದ ಹಲವು ಸಮಿತಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಶ್ರೀಮತಿ ಹಾಗೂ ಮಕ್ಕಳು ಕೂಡ ಕವಿ ಲೇಖಕರಾಗಿ ಭರತನಾಟ್ಯ ಕಲಾವಿದರಾಗಿ ಹೆಸರಾಗಿದ್ದಾರೆ.
All Posts
3 thoughts on “ಕಾಮನ ಹುಣ್ಣಿಮೆ”
ಹೋಳಿಹುಣ್ಣಿಮೆಯ ಅಂತರಾಳವನ್ನು ಅರ್ಥೈಸಿದ ಕವನ ಸೊಗಸಾಗಿದೆ
ಕವನದ ಒಳಗೊಂದು ಪ್ರಣಯ!
ಕಾಮನ ಹೋಳಿ ಹುಣ್ಣಿಮೆಯ ಕವನ ಸೊಗಸಾಗಿದೆ