ಗಜಲ್

ಕಣ್ಣು ಹಾಯುವವರೆಗೂಕತ್ತುಚಾಚಿ ನೋಡಿದರೂ ನೀ ಬರಲಿಲ್ಲ
ಹೊರೆ ಕೆಲಸ ಮುಗಿದು ಕತ್ತಲಾವರಿಸಿದರೂ ನೀ ಬರಲಿಲ್ಲ/

ಸಂತೆಗೆ ಹೋಗಿ ಬರುವಿಯೆಂದು ಸಂಚಿಯನು ಸಜ್ಜಾಗಿಸಿದೆ..
ಆಟಪಾಠಗಳೆಲ್ಲ ಮುಗಿಸಿ ಮಕ್ಕಳೆಲ್ಲ ಮಲಗಿದರೂ ನೀ ಬರಲಿಲ್ಲ/

ಕಂಬನಿದುಂಬಿ ನಾಳೆಯಡುಗೆಗೆ ಖಾಲಿ ಡಬ್ಬಿಗಳ ತಡಕಾಡುತ್ತಿರುವೆ
ಅಳಿದುಳಿದಿದ್ದರಲ್ಲೇ ಮಾಡಿದಅಡುಗೆಆರಿದರೂ ನೀ ಬರಲಿಲ್ಲ/

ಅವಮಾನ ನುಂಗುತ್ತಸಾಲಕೊಟ್ಟವರಿಗೆತಾರಮ್ಮಯ್ಯ ಆಡಿಸಿದೆ
ನೀಲನಭದಿ ಚಂದಿರ ನನ್ನನ್ನು ಅಣಕಿಸಿದರೂ ನೀ ಬರಲಿಲ್ಲ/

ಮದಿರೆಗೆ ಮರುಳಾದವಗೆ ಮಡದಿಯ ನೆನಪು ಕಾಸು ತೀರಿದಾಗಷ್ಟೇ
ನಿತ್ಯದಂತೆ ನಿರೀಕ್ಷೆಯ ನರಕದಲಿ  ಮನಸು ಕುದಿದರೂ ನೀ ಬರಲಿಲ್ಲ/

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

4 thoughts on “ಗಜಲ್”

  1. ಶೇಖರಗೌಡ ವೀ ಸರನಾಡಗೌಡರ್

    ಮದಿರೆಯ ನಿಷೇಧವಾಗಬೇಕಿದೆ ಅಷ್ಟೇ. ಒಳ್ಳೆಯ ಕವನ.

  2. ಧರ್ಮಾನಂದ ಶಿರ್ವ

    ಕುಡುಕನ ಹೆಂಡತಿಯ ಮಾನಸಿಕ ತೊಳಲಾಟವನ್ನು, ದುಗುಡವನ್ನು ಗಜಲ್ ಸಮರ್ಥವಾಗಿ ಹೊರಗೆಡಹಿದೆ. ಅವಳೊಳಗಿನ ಗಂಡ ಬಂದಾನು ಎನ್ನುವ ನಿರೀಕ್ಷೆಯ ತುಂಬ ನೋವಿನ ಸೆಲೆಗೆ ಒದಗಿ ಬಂದ ರೂಪಕಗಳು ಮನೋಜ್ಞವಾಗಿವೆ.
    ಅಭಿನಂದನೆಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter