ನಾನು ಮತ್ತು ಅವನು

ಪ್ಪಿದ್ದೇವೋ ಇಲ್ಲವೋ
ಆದರೆ ಅಪ್ಪಿದ್ದಂತೂ ಸತ್ಯ
ನಾನು ಮತ್ತು ಅವನು!
ಇಬ್ಬರೂ ಅಭೇಧ್ಯ

ನನ್ನಲ್ಲಿ ಅವನು
ಅವನಲ್ಲಿ ನಾನು
ಆದರೂ ಅವನ ಲೆಕ್ಕದ ಮುಂದೆ
ನನ್ನದು ತಲೆಕೆಳಗೆ

ಎಲ್ಲ ಕ್ಷಣಗಳೂ
ಅವ ಮುದ್ದಿಸುವದಿಲ್ಲ
ಎದ್ದು ಬಿದ್ದು ನಾನವನ
ಅನುಸರಿಸಲೇ ಬೇಕು

ಬಹುತೇಕ ಅವನು 
ನನ್ನ ಪರವಾಗಿರುವುದಿಲ್ಲ
ನಿರ್ಧಾರಗಳು ತಪ್ಪಾಗಿ
ಗೀರು ಬಾರುಗಳು ಮೂಡಿದ್ದಿದೆ,

ಅಪರೂಪಕ್ಕೊಮ್ಮೆಮ್ಮೆ
ಜೀವನದ ರುಚಿಗಳನ್ನೇಲ್ಲ
ಬಟ್ಟಲಲ್ಲಿ ಬಡಿಸಿದ್ದಿದೆ
ಬೇವು ಬೆಲ್ಲಗಳ ಕೂಟ
ಅವನದು

ಸರಕುಖಾಲಿಯಾದಾಗೆಲ್ಲ
ಮತ್ತೆ ಕಿರಣ ಕಾಣಿಸುವ ಆತ್ಮೀಯ
ನಿರಂತರ ನಿಶ್ಚಲ ನಿರುಪಾಯ
ನಾನು ಮತ್ತು ಬದುಕು

ಅವ ಕಲೆಗಾರ ಮಾಯಗಾರ
ಅವನ ಯೋಜನೆ ಯೋಚನೆ
ಆಟ-ಪಾಠ ಕಾಟ ನೋಟ
ಉಹಾತೀತ... ಅಘೋಷಿತ....
*****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

6 thoughts on “ನಾನು ಮತ್ತು ಅವನು”

  1. ಧರ್ಮಾನಂದ ಶಿರ್ವ

    ಸುಂದರ ಭಾವಪೂರ್ಣ ಮನಮುಟ್ಟುವ ಕವನ.
    ಬದುಕಿನ ಒಟ್ಟಂದವನ್ನು ಕಟೆದು ನಿಲ್ಲಿಸಿದ ಹಾಗೆ…

  2. Raghavendra Mangalore

    ರೇಡಿಯೋ ಕವನ ಕೇಳುವ ಅನುಭವ ಬೇರೆ. ನಾಲ್ಕನೇ ಪ್ಯಾರದಲ್ಲಿನ ವಾಕ್ಯ ‘ನಿರ್ಧಾರಗಳು ತಪ್ಪಾಗಿ ಗೀರು ಬಾರುಗಳು ಮೂಡಿದ್ದಿದ’ ತುಂಬಾ ಹಿಡಿಸಿತು. ಕವನ ಚೆನ್ನಾಗಿದೆ

  3. ಲಕ್ಷ್ಮೀ

    ನೈಜತೆಯನ್ನು ಅನನ್ಯವಾಗಿ ಬಿಂಬಿಸುವ ಸಾಲುಗಳು. ಮನಸ್ಸಿಗೆ ತುಂಬಾ ಹಿಡಿಸಿತು.

  4. ಶೇಖರಗೌಡ ವೀ ಸರನಾಡಗೌಡರ್

    ಅಭಿನಂದನೆಗಳು. ಬಾವನೆಗಳ ಭರಪೂರ ಪ್ರವಾಹ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter