ಸ್ಪರ್ಶ

ಜಳ ಜಳ ಜಳಕ ಅಂದರೆ ಪ್ರೀತಿ ಅಮ್ಮನಿಗೆ
ಅಪ್ಪನಿಂದಲು ಅದು ರವಷ್ಟು ಹೆಚ್ಚು ಎನುವಷ್ಟು
ಆದರೆ ಆಕೆಯ ಸ್ವಂತ ಜಳಕಕ್ಕೆ ತಾಸು ಬೇಡ
ನಿಮಿಷ ಸಾಕು!

ನಾವು, ಮಕ್ಕಳನ್ನು ಹಿಡಿದಿಟ್ಟು ಬಾಲ್ಯದಲ್ಲಿ
ತಲೆ ಕೈಕಾಲುಗಳಿಗೆ ಎಣ್ಣೆ ಹಚ್ಚಿ
ಬಚ್ಚಲು ಮನೆಯಲ್ಲಿ ಕುಕ್ಕುರು ಕೂರಿಸಿ
ಬಟ್ಟೆ ಬಿಚ್ಚಿ

ಸಂತೆ ಮನೆಯಲ್ಲಿ ಮಡಿಕೆಯ ಬಡಿದು ನೋಡಿ
ವಿಕ್ರಯಿಸಿಕೊಳ್ಳುವ ಹಾಗೆ
ಬಿಸಿಬಿಸಿ ನೀರನ್ನು ಮುಟ್ಟಿ ಮುಟ್ಟಿ
ಹೊಯ್ಯುತಿದ್ದಳು ನಮಗೆ
ಖುಷಿಯಲ್ಲಿ
  
    ನೆನಸಿಕೊಂಡರೆ ಈಗ
    ಜಳಕ ಹೊಯ್ಯುತ್ತಿದ್ದದು ಆಗ ಆಕೆ
    ನಮಗಲ್ಲ
    ಆಕೆಗೇ ಇರಬಹುದಲ್ಲ?
                                   ಡಾ.ನಾ.ಮೊಗಸಾಲೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಸ್ಪರ್ಶ”

  1. Raghavendra Mangalore

    ಡಾ. ಮೊಗಸಾಲೆಯವರ ಕವಿತೆಗಳನ್ನು ಓದುವುದೇ ಒಂದು ಸಂಭ್ರಮ. ಇನ್ನೂ ಸ್ಪರ್ಶ ಅದಕ್ಕೆ ಹೊರತಾಗಿಲ್ಲ..

  2. ಉದಯಕುಮಾರ ಹಬ್ಬು

    ಮೃದುವಾದ ಸ್ಪರ್ಷವಿದೆ ಅಮ್ಮನ ಪ್ರೀತಿಯ ಸ್ಪರ್ಷವಿದೆ.ಸರಳವಾಗಿ ಕಂಡರೂ ಸಂಕೀರ್ಣತೆಯ ಸ್ಪರ್ಷವಿದೆ.

  3. ಧರ್ಮಾನಂದ ಶಿರ್ವ

    ಅಮ್ಮನ ಪ್ರೀತಿಯ ಸ್ಪರ್ಶ ಜಳಕದಲ್ಲಿ ಅಭಿವ್ಯಕ್ತಿಗೊಂಡಂತೆ ಸುಂದರ ಭಾವಲಹರಿಯ ಕವನ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter