ಸದಾ ಎಚ್ಚರದಲ್ಲಿ ಬರೆದ ಬಣ್ಣದ ಚಿತ್ರ ಮುಚ್ಚಿದ ಬಾಯಿ ತೆರೆದ ಕಣ್ಣು ಹಸಿಯಾದ ಸುಂದರ ಮುಖ ಹಚ್ಚಿಟ್ಟು ಗೋಡೆಗೆ ಅದನ್ನೇ ದಿಟ್ಟಿಸುತ್ತಾ ಕುಳಿತೆ.. ಅರೇ!! ಅವರುಗಳು ಕಣ್ಣು ಹಾಯಿಸದೇ ಹಾದು ಹೋದರಲ್ಲ!! ಕೆಲವೊಮ್ಮೆ ಚೆಲ್ಲಾಪಿಲ್ಲಿ ಮಾಸಿದ ಕಣ್ಣು ನೆರಿಗೆಯ ಮುಖ.. ಶುಷ್ಕ. ಆಗಲೂ.. ಛೀ!! ಇದೆಂತ ಚಿತ್ರ? ಬಣ್ಣವಿದೆ ಇನ್ನೂ.. ಒಂದರ ಮೇಲೊಂದು ಲೇಪಿಸಿ ಕಣ್ಣು ಕುಕ್ಕುವಷ್ಟು!! ಎಲ್ಲವೂ ಮತ್ತೆ ಚೀಲಕ್ಕೆ ರಾತ್ರಿಯಿಡೀ ಅದೇ ಕೆಲಸ ಜಂಬೆ ಗಲ್ಲ ಕಪ್ಪು ಕಣ್ಣಂಚು ಇದ್ದಬಿದ್ದ ಬಣ್ಣಗಳನ್ನೆಲ್ಲಾ ಬಳಿದು ಅಬ್ಬಾ!! ಬಳಲಿದೆ ನಾಳಿನ ಸಂತೆಯಲ್ಲಿ ಬಂಪರ್!! ಕ್ರಯಕ್ಕೆ ಬಿದ್ದವು ಅಲ್ಲಿ ಸವಾಲಿನ ಮೇಲೆ ಅಲ್ಲಿನೋಡು!! ಕಿತ್ತಾಟ ಗುದ್ದಾಟ ಹ್ಞಾಂ!! ಕೊಳ್ಳಲು ಆ ಬಣ್ಣದ ಚಿತ್ರ ಅದೇ.. ಕೆಂಪು ಚೆಲ್ಲಿದ ಕಪ್ಪು ಚುಕ್ಕಿಯ ಆ ಚಿತ್ರ.. ಆದರೆ ಈಗ ಈ ಚಿತ್ರ ನನ್ನದೆ!?

4 thoughts on “ಚಿತ್ರ ಸಂತೆ”
ಧನ್ಯವಾದಗಳು ವಿಶ್ವಧ್ವನಿ
Chanchala vidagdha bhavagalu chitrada mele banna chellidante… abhinandane.
Chanchala vidagdha bhavagalu chitrada mele banna chellidante.
Abhinandane.
ಧನ್ಯವಾದಗಳು ಸರ್