ಸದ್ದಾಗುತ್ತಿದೆ ವಿಶ್ವವೆಲ್ಲಾ ಭಾವನೆಗಳ ಹೂರಣ ಮದ್ದಲ್ಲದ ಮದ್ದಾಗಿ ನೋವ ತೋರಣಕೆ ಪದಗಳ ಮೇಲೋಗರ ಕುದಿಮನಕೆ ಹರಿಯುತಿದೆ ಅದೇ ತಂಗಾಳಿ ಅರಳುತಿವೆ ಹೂವು ಸುರಿಯುತಿದೆ ಅದೆ ಮಳೆಯು ಹೊರಳುತಿವೆ ಋತುಗಳು ಕರಗುತಿವೆ ಪದಗಳು ಅಸಹಾಯಕತೆ, ಅದೇ ನಿಟ್ಟಿಸಿರು ಅಸಹನೆಯ ಮನ ಹೊಸಗಾಳಿಯ ನೋವು ನಿಸ್ಪೃಹ ತಹತಹ ಹೊಸೆಯುವುದು ಅಕ್ಷರದಿ ಆಳಕ್ಕಿಳಿಯದ, ಮೇಲೇರದ ಸಲ್ಲದ ಸಂಗತಿಗಳ ಗತಿಯಲಿ ಸುಳ್ಳಿನಕಂತೆಗಳ ಎಸೆದು ಹಳೆಹಾದಿಯಲಿ ಸಾಗಿ ಕಳೆಯುವುದು ಕಾಲ ಅವಸಾನವಾಗುತಿದೆ ಹಾದಿ ಸವಿಯಲಾಗದೆ ಭಾವ ಕವಿಮನ ಮಿಡಿಯದೆ ಕವಿತೆ ಕಾಯುತ್ತಿದೆ, ಕಣ್ಣೀರು ಮಿಡಿದು ಕಾವ್ಯವಾಗಲು ****
