ಮನೆಯ ಮುಂದಿನ ಉದ್ಯಾನದಲ್ಲಿ ಮರಳು ತುಂಬಿಸಿಟ್ಟಿರುವರು ಒಂದು ಸಿಮೆಂಟಿನ ಚೌಕಟ್ಟಿನಲ್ಲಿ ದಿನವೂ ಮಕ್ಕಳು ಓಡಿ ಬರುವರಿಲ್ಲಿ ಅರಳಿದ ಕಂಗಳ ಜೊತೆಗೆ ಮರಳಿನಾಟದ ಹುಮ್ಮಸ್ಸಿನಲ್ಲಿ ಮರಳಲ್ಲೇ ಕೂತು ಕೈ ಕಾಲುಗಳ ಹೂತು ಆಡುವ ಬಗೆ ಬಗೆಯ ಆಟಗಳು ಮೊಗೆದು ಸುರಿದು ಅಳೆದು ಸೋತು ತಂದೆ ತಾಯಂದಿರ ಗಸ್ತು ಎಡಬಲದಲಿ ಬೀಳಬಾರದು ಮರಳ ಕಣಗಳು ಮಗುವಿನ ಮುಗ್ಧ ಕಣ್ಣುಗಳಲಿ ಬರಿಗೈಯ ಮಗುವೊಂದು ರಾಗ ತೆಗೆದಿತ್ತು ಬೊಗಸೆ ತುಂಬಿದ ಉಸುಕು ಚಿಗುರು ಬೆರಳಿನ ನಡುವೆ ಜಾರಿಹೋಗಿತ್ತು ಜಾಣ ಮಗುವೊಂದರ ಕೈಲಿ ಪುಟಾಣಿ ಸೌಟು ಮರಳ ಮೊಗೆದು ತುಂಬಲು ಮತ್ತೆ ಪುಟ್ಟದೊಂದು ಬಣ್ಣದ ಬಕೆಟ್ಟು ನೀರು ಸೋಕಿಸಿದಾಗ ಮರಳ ಬೆಟ್ಟ ತಾಳುತ್ತೆ ಬೇಕಾದ ಆಕಾರ ಮರಳ ಮನೆ, ಗೋಪುರ, ಗುಮ್ಮಟ ಮರಳಿನಾಟ ಆಡುವುದು ಎಷ್ಟು ಸರಳ ಪಾಲಿಸಿದರೆ ಸಾಕು ಒಂದೇ ನಿಯಮ ಆಡಬೇಕು ಚೌಕಟ್ಟಿನಲ್ಲೇ ಎರಚದೇ ಮರಳ - ಸುಚಿತ್ರಾ ಹೆಗಡೆ
ಚೌಕಟ್ಟು
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಸುಚಿತ್ರಾ ಹೆಗಡೆ
ಸುಚಿತ್ರಾ ಹೆಗಡೆ
ಉತ್ತರ ಕನ್ನಡ ಜಿಲ್ಲೆಯ, ಕುಮಟಾದ, ಕತಗಾಲ ಹುಟ್ಟೂರು. ಕುಮಟಾದ ಬಾಳಿಗಾ ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ. ಕಮಲಾ ಬಾಳಿಗಾ ಕಾಲೇಜಿನಿಂದ rank ನೊಂದಿಗೆ ಬಿ ಎಡ್ ಪದವಿ. ಹಾಗೆಯೇ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಮತ್ತೆ rank ನೊಂದಿಗೆ ಸ್ನಾತಕೋತ್ತರ ಪದವಿ.
ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಹಲವು ಕವನಗಳು, ಲೇಖನಗಳು, ಪ್ರವಾಸಿ ಬರಹಗಳು ನಾಡಿನ ವಿವಿಧ ಪ್ರಮುಖ ಪತ್ರಿಕೆ/ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ.
ಇಪ್ಪತ್ತೆರಡು ವರುಷಗಳಿಂದ ಹೈಸ್ಕೂಲು, ಕಾಲೇಜುಗಳಲ್ಲಿ ಮುಖ್ಯ ಶಿಕ್ಷಕಿ, ಪ್ರಾಂಶುಪಾಲೆ, ಆಂಗ್ಲ ವಿಭಾಗದ ಮುಖ್ಯಸ್ಥೆ ಮೊದಲಾದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಈಗ ಸ್ವಂತ ಉದ್ಯೋಗವನ್ನು ಆರಂಭಿಸಿದ್ದಾರೆ. ದೇಶ ಸುತ್ತುವುದು ಮತ್ತು ಕೋಶ ಓದುವುದು ಎರಡೂ ನೆಚ್ಚಿನ ಹವ್ಯಾಸಗಳು. ಸಮಾರು ಇಪ್ಪತ್ತೈದು ದೇಶಗಳನ್ನುಈಗಾಗಲೇ ನೋಡಿದ್ದಾರೆ.
‘ಶ್ರಾವಣ’ ಬ್ಲಾಗಿನಲ್ಲಿ ಮೂಡಿ ಬರುತ್ತಿರುವ ಅವರ ಪ್ರವಾಸ ಕಥನಗಳ ಸರಣಿ ತುಂಬ ಜನಪ್ರಿಯವಾಗಿದೆ. ಸುಚಿತ್ರಾ ಅವರ ಮೊದಲ ಕವನ ಸಂಕಲನ ‘ ಈ ಚಿಟ್ಟೆ ಕಾಡಿದ ಹಾಗೆ’ ಮೈಸೂರಿನ ‘ಮಡಿಲು’ಪ್ರಕಾಶನದಿಂದ ಸೆಪ್ಟೆಂಬರ್ 2021 ರಲ್ಲಿ ಬಿಡುಗಡೆಯಾಗಿದೆ. ಪ್ರವಾಸ ಬರಹಗಳ ಪುಸ್ತಕವೊಂದು ಪ್ರಕಟಣೆಯ ಹಾದಿಯಲ್ಲಿದೆ.ಮೂಲತಃ ಬೆಂಗಳೂರು ನಿವಾಸಿಯಾಗಿದ್ದು ಪ್ರಸ್ತುತ ಸಾಂಸ್ಕ್ರತಿಕ ನಗರಿ ಮೈಸೂರಲ್ಲಿ ನೆಲೆಸಿದ್ದಾರೆ.
All Posts
2 thoughts on “ಚೌಕಟ್ಟು”
ಕವನ ಸರಳ ಎನಿಸಿದರೂ ಅದಕ್ಕೊಂದು ತಾತ್ವಿಕ ಹಿನ್ನೆಲೆಯಿದೆ. ಓದಿ ಸಂಭ್ರಮಿಸಿದೆ.
Maguvina manassinanthah ondu shuddha kavana..
.