ಮುಂಜಾನೆಯ ಮಂಜಿನಲ್ಲಿ ಮರಗಳು ದೆವ್ವವಾಗಿ, ಪೊದೆಗಳು ಕರಡಿಯಾಗಿ ಹಳೆಮುಖಕೆ ಸೆಗಣಿಮೆತ್ತಿ ಹೊಸಮುಖದ ಕಣ್ಣು ಕಿತ್ತು ಕಂಡದ್ದುಕಾಣದಾಗಿ ಕಾಣದ್ದು ಕಂಡಂತಾಗಿ ಮುಂಜಾನೆ ಅಯೋಮಯವಾಯಿತ್ತು ನೋಡಾ. ಒಳಿತು ಅರಿವುಗೆಟ್ಟು ಕೆಡುಕು ಮನಸು ಗೆದ್ದು, ಅದರಿಂದಲೆ ಲೋಕ ಕಟ್ಟುವ, ಸುತ್ತಣವರನ್ನೆಲ್ಲ ತನ್ನ ಕಣ್ಣಲ್ಲೆ ಕಾಣುವಂತಿಸುವ ಕಾಣದಿದ್ದರೆ ಕಾಣಬೇಕೆಂದು ಹಠಾಯಿಸುವ ಮತ್ತೂ ಕಾಣದಿದ್ದರೆ ಶತ್ರುಬಣವೆಂಬ ಹಣೆಪಟ್ಟಿ ಕಟ್ಟುವಯೀ ʻಕಾಲಪುರುಷಂಗೆ ಗುಣಮಣಮಿಲ್ಲಂಗಡಾ.ʼ ಶತ್ರುಬಣವಿಲ್ಲದೆ ನಿದ್ದೆ ಹತ್ತದು ಎಂದು ಕುಂತನಿಂತಲ್ಲೆ ಕೈಕಾಲು ತಲೆಕೆರೆದು, ನಿತ್ಯದಲಿ ಕೋರ್ಟುಕಛೇರಿಯಲೆದು ತನ್ನ ದಾರಿಗೆ ಬರದವರ ಚೀತ್ಕಾರ ಪೂತ್ಕಾರಗೈದು ವಿಕೃತ ಸುಖ ಪಡೆವವರ ಕಂಡೂ ಕಾಣದ ಲೋಕಕ್ಕೆ ಲಜ್ಜೆಗೆಟ್ಟೆ ಕಾಣಾ. ******
3 thoughts on “ಲಜ್ಜೆಗೆಟ್ಟವರು”
ಅರ್ಥಪೂರ್ಣ ಕವಿತೆ ಅಭಿನಂದನೆಗಳು
ಲಜ್ಜೆಗೆಟ್ಟವರ ಮನಸ್ಥಿತಿಯ ವರ್ಣನೆ ಚೆನ್ನಾಗಿದೆ. ಮನುಷ್ಯನ ವಾಸ್ತವದ ಅನಾವರಣ.
ಮಾರ್ಮಿಕ ಕವನ. ಇವತ್ತಿನ ವಿದ್ಯಮಾನಗಳಿಗೆ ಚೆನ್ನಾಗಿ ಹೊಂದುತ್ತದೆ.