(ಮಕ್ಕಳ ಪದ್ಯ)
ಒಂದು ಗುಬ್ಬಿ ಅದರ ಕೀರ್ತಿ ದಿಗ್ದೇಶಗಳಿಗೆ ಹಾರಿ ಹಾರಿ ಹಬ್ಬಿ... ಅದರಿಂದ ಗುಬ್ಬಿ ಸಿಕ್ಕಾಪಟ್ಟೆ ಉಬ್ಬಿ ಏನೇನೋ ಆಟಗಳ ಆಡಿ ಕಣ್ಣುಕಟ್ಟು ಮಾಡಿ ಆಗಿಬಿಟ್ಟಿತು ಪಾರಿವಾಳ ನಕ್ಕುಬಿಟ್ಟಿತು ದಾಸವಾಳ ಎಲಾ, ನೀ ನಕ್ಕೆಯೇಕೆ ದಾಸವಾಳ? ಕೇಳಿತು ಹೊಸ ಪಾರಿವಾಳ ಹೇಳಿತು ಹೂವು ನಮ್ಮಂತೆ ಇರಬೇಕು ನಾವು! ಪಾರಿವಾಳವಾಯಿತು 'ಒಂದು ಗುಬ್ಬಿ' ಬರೀ ನಾಕು ದಿನ ಬ್ರೇಕಿಂಗ್ ಸುದ್ದಿ! ಗುಬ್ಬಿಯೇ ಆಗಿದ್ದು ನೀನು ಏನೆಲ್ಲ ಮಾಡಿದೆ ಎಷ್ಟೂರು ತಿರುಗಿದೆ ಗುಬ್ಬಿಗಳ ಕಾಪಾಡಿ ಕಾಪಾಡಿ ಎಂದೆ ಹೊಸ ಅರಿವು ತಂದೆ ಹೆಸರು ಗಳಿಸಿದೆ, ಅಲ್ಲವೇನು? ನಿನ್ನ ಸಾಧನೆಯ ಮರೆಯಬಹುದೇನು? ನಾನಿನ್ನು ಇರೋದು ಕೆಲ ಹೊತ್ತು ಮಾತ್ರ ಹೇಳುವೆನು ಮಿತ್ರ ಮತ್ತೆ ನೀ ಗುಬ್ಬಿ ಮರಿಯಾಗು ಪಾರಿವಾಳದ ವೇಷ ಬರಿ ಸಂತೆ ಸೋಗು ವೇಷ ಬದಲಿಸಿ ನೀನು ಗುಬ್ಬಿಯೇ ಆಗು ** ಒಪ್ಪಿಕೊಂಡಿತು ಹಕ್ಕಿ ಗುಬ್ಬಿಮರಿಯಾಯ್ತು! ನಮ್ಮ ಕಥೆ ಮುಗಿಯಿತು ಎಲ್ಲ ಸರಿ ಹೋಯ್ತು! ^^^
9 thoughts on “ ಗುಬ್ಬಿ ಕಥೆ”
Chandada neeti kathe….
ಮುದ್ದು ಮಕ್ಕಳಿಗಷ್ಟೇ ಅಷ್ಟೇ ಅಲ್ಲ ಹಿರಿಯರಿಗೂ ಹಿಡಿಸುವ ಸುಂದರ ಕವಿತೆ
ಗುಬ್ಬಿ ಪಾರಿವಾಳವಾಗಿ ಪುನಹ ಗುಬ್ಬಿಯಾಗುವ ಕವಿಕಲ್ಪನೆ ಅಪ್ಯಾಯಮಾನ
Nice one👏👏👌👌
ಚೆನ್ನಾಗಿದೆ
nammante irabeku naavu – tumba sundaravaada saalu.
ಮಕ್ಕಳಿಗೆ ಚಂದದ ಪದ್ಯ.ಕೇಳುವ ದೊಡ್ಡವರಿಗೆ ಕಿವಿಮಾತು.ಚೆನ್ನಾಗಿದೆ👌🏻🙏
ಬಹಳ ಚೆನ್ನಾಗಿದೆ. 👌👌👌👍👍👍
Looks simple but very beautiful and meaningful