ನಿರೀಕ್ಷೆಯಲಿ…

ಕಪಾಟಿನಲ್ಲಿ
ಮೂಲೆ ಸೇರಿದ
ಹಳೇ ಪುಸ್ತಕ
ಮೌನ ಧಾರಣೆ ಮಾಡಿ
ಬಿಮ್ಮನೆ ಒರಗಿದೆ ...
ಅದೆಷ್ಟು ಜನರ
ಹಸಿಸ್ಪರ್ಶದಲಿ ಪುಳಕಗೊಂಡು
ತನ್ನೊಳಗಿನ ಹೂರಣವ
ಓದುಗನ
ಮನಕ್ಕೆ ವರ್ಗಾಯಿಸಿ
ಮಿಂಚುವ ಕಣ್ಣುಗಳ ಆನಂದದಲಿ
ಧನ್ಯತೆ ಅನುಭವಿಸಿದಿದೆ..!

ಒಳಗಿನ ಪುಟಗಳದೆಷ್ಟೋ
ಕಾಣೆ
ಕಿವಿ ಹಿಂಡಿದ ಕುರುಹು, 
ಪೆನ್ನಿನ ಗುರುತು
ಒಡಲಲಿ
ಅವಿತಿಟ್ಟುಕೊಳ್ಳುವ
ಯತ್ನದಲಿ ಸೋತು
ಮತ್ತೆ ಹೊಸ ಓದುಗನ
ನಿರೀಕ್ಷೆಯಲಿ ಕಾದಿದೆ !

ಯಾರು ಅರ್ಥಮಾಡಿಕೊಂಡರೋ..
ಬಿಟ್ಟರೋ...
ನಿರ್ವಂಚನೆಯಿಂದ
ತನ್ನ ಒಡಲ ತೆರೆದು
ಬಟಾಬಯಲು
ಮಾಡುವ ಕಾತರದಲಿ
ತನ್ನ ತಾನು ಸಿದ್ಧಗೊಳಿಸಿದೆ!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

8 thoughts on “ನಿರೀಕ್ಷೆಯಲಿ…”

  1. ಕೌಡೂರು ನಾರಾಯಣ ಶೆಟ್ಟಿ, ಇಟೆಲಿ

    ಒಂದು ಉತ್ತಮ ಕವನ, ಈ ಹೊತ್ತಿಗೆ ಹೊಂದುವ, ಹೊತ್ತಗೆಯ ಬಗ್ಗೆ. ಕಾಲವೇ ಹಾಗಲ್ಲವೆ, ತಾಳೆಗರಿಯಿಂದ ಕಾಗದಕ್ಕೆ, ಸದ್ಯ ವಿದ್ಯುನ್ ಮಾನಕ್ಕೆ. ಮುಂದೊಂದು ದಿನ ನೇರ ಮಸ್ತಿಷ್ಕಕ್ಕೆ. ಆದರೆ ಏನಂತೆ, ಪುಸ್ತಕದ ಪುಟ ತೆರೆದು ಓದಿ ಮನನ ಮಾಡಿಕೊಳ್ಳುವ ಖುಷಿಯೇ ಬೇರೆ. ಕಾಲದೊಂದಿಗೆ ಕಾಲು ಹಾಕುವ.

  2. ಪುಸ್ತಕದ ಪ್ರಸಕ್ತ ಸ್ಥಿತಿಯ ಬಗ್ಗೆ ಮೂಡಿ ಬಂದ ಉತ್ತಮ ಕವನ ಪ್ರಸ್ತುತಿ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter