ಗಜಲ್  

ಪ್ರೀತಿಯಿಲ್ಲದ ಸಂಬಂಧ ಬೆಳೆಸುವುದೇಕೆ ಮರೆತು ಬಿಡು
ಕೋಪವಿಲ್ಲದ ಮೇಲೆ ರಮಿಸುವ ನಟನೆಯೇಕೆ ಮರೆತು ಬಿಡು

ಬರುಡಾದ ಬದುಕಲಿ ಒಂದಾಗಿ ಇರುವುದು ಬೇಡವಾಗಿದೆ
ಇರುಳಿನಲಿ ನೆನೆಯುತ್ತ ಕನಸು ಕಾಣುವುದೇಕೆ ಮರೆತು ಬಿಡು

ಒಂದು ದಿನವು  ಜೀವ ಹೂವಾಗಿ ಅರಳಿ ನಲಿದಾಡಲಿಲ್ಲ
ಆ ರಾತ್ರಿಯ ಕ್ರೂರ ಯಾತನೆಯ ನೆನಪೇತಕೆ ಮರೆತು ಬಿಡು

ಹೃದಯದ ಪಿಸು ಮಾತು ಅರಿಯುವ ಕಾತುರತೆ ಮನದೊಳಗಿಲ್ಲ
ತೋರಿಕೆಗೆ ಕೈ ಹಿಡಿದು ನಡೆಯುವ ಬಯಕೆಯೇಕೆ ಮರೆತು ಬಿಡು

ಬಾಳ ಮುಗಿಲಲ್ಲಿ ಒಲವಿನ ಕಾಮನ ಬಿಲ್ಲು ಮೂಡಲಿಲ್ಲ
ವೈಶಾಖದ  ಬಿಸಿಲಿಗೆ  ತಂಪಿನ ಸುಖವೇತಕೆ ಮರೆತು ಬಿಡು

ಜೀವವು ಉಸಿರಲ್ಲಿ ಬೆರೆತು ಮನಸುಗಳು ಬೆಸಗೊಳ್ಳಲಿಲ್ಲ
ನೆರಳುಗಳು ದೂರಾದರೆ ಅಗಲಿಕೆಯ ನೋವೇಕೆ ಮರೆತು ಬಿಡು

ಹಗಲು ಇರುಳುಗಳ ಅಂತರ ಮರೆತು ಒಂಟಿಯಾಗಿ ಬಾಳಿದೆ
ಕತ್ತಲು ದೂಡುವ ಶಶಿ"ಪ್ರಭೆ"ಯ ಆಸೆಯೇಕೆ ಮರೆತು ಬಿಡು

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಗಜಲ್  ”

  1. dr k govinda bhat bhat

    ಭಾವಪೂರ್ಣವಾದ ಗಜಲ್

    ಚೆನ್ನಾಗಿ ಮೂಡಿಬಂದಿದೆ

    ಸಂಪರ್ಕ ತಿಳಿಸುವಿರಾ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter