ಬೆಳ್ಳಕ್ಕಿ ಸಾಲು

ಇಹಪರಕೆ ಕೊಂಡಿಯಾದಂತಿದೆ ಈ ಬೆಳ್ಳಕ್ಕಿ ಹಿಂಡು
ಹಿಂಡಾಗಿ ಅಥವಾ ಬೇರೆ ಬೇರೆಯೂ ಆಗಿ 
ಬೆಳ್ಳಂಬೆಳಗ್ಗೆ ಬೆಳಕಿಗೆ ಬೆಳಕಾಗಿ ಪರಕ್ಕೆ ಹೊರಟು
ಮರಳುವುವು ಸಂಜೆ ಮತ್ತೆ ಇಹವೆ ಬೇಕೆಂದು ಬಯಸಿ

ನೋಡುತ್ತಲಿದ್ದರೆ ಅವುಗಳ ಹಿಂಡು ಪುರಾಣದ ಪಾರ್ಥ
ಕಟ್ಟಿದ ಹಾಗೆ ಸೇತುವೆಯ ಬಾಣಗಳಿಂದ ಸ್ವರ್ಗಕ್ಕೆ
ಇಳಿದಂತೆ ಇಂದ್ರನೈರಾವತವು ಅಲ್ಲಿಂದ 
ಅದೊ ಅದೋ ಎಂಬಂತೆ ಕಚಗುಳಿಯಿಡುತ್ತ ಮನಸಿಗೆ

ನನ್ನ ಕಣ್ಣಿನ ಸಾರ್ಥಕ್ಯ ಇರುವುದು ಹೀಗೆ, ಇಹಪರವ
ಒಂದಾಗಿಸುವುದಾಗಿ ಇದ್ದು ಇವು ಸೇತುವೆಯ ಮೇಲೆ
ಆದರೂ ತೇಲಲಾರೆ ನೆಲಬಿಟ್ಟು ಇರುವೆ ಇಲ್ಲೇ 
ಇದ್ದರೆ ಮೂರನೇ ಲೋಕ ಬೆಳ್ಳಕ್ಕಿಯಾಗಿ ಹಾರಲು

                                         ಡಾ.ನಾ.ಮೊಗಸಾಲೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಬೆಳ್ಳಕ್ಕಿ ಸಾಲು”

  1. Raghavendra Mangalore

    ಸರಳ ಪದಗಳ ಬಳಕೆ… ಆದರೆ ಆಶಯ ಅದ್ಭುತ. ಕವನ ಮನಸೂರೆಗೊಂಡಿತು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter