ಮೇಣದ ಬತ್ತಿ
ಆ ಮನೆಯಲ್ಲಿ ಇಬ್ಬರಿಗೆ ಕರೋನ. ಆಸ್ಪತ್ರೆಯಲ್ಲಿ ಮಾತ್ರ ಒಂದೇ ಬೆಡ್ ಖಾಲಿ ಇದೆ… ಒಬ್ಬರು ಸೇರಿದರು. ಚಿಕಿತ್ಸೆ ಪಡೆದರು. ಇನ್ನೊಬ್ಬರು ಹಾಗೆಯೇ ಹೋದರು…. ಪುತ್ರ ಚಿರಂಜೀವಿ… ತಾಯಿ ತ್ಯಾಗಮಯಿ!
ಕೊನೆಯ ಶ್ವಾಸ
“ಜೀವ ಹೋದಂತಿದೆ…”ಪಿ ಪಿ ಇ ಕಿಟ್ ಧರಿಸಿದ ಒಬ್ಬ ವೃದ್ಧ ಯಜಮಾನ ಘೋಷಿಸಿದ…. ಆದರೆ ನಿಜ್ವಾಗ್ಲೂ ಕರೋನಕ್ಕೆ ತುತ್ತಾದ ಆತ ಪೂರ್ತಿ ಉಸಿರಾಟ ನಿಲ್ಲಿಸಿರಲಿಲ್ಲ.
“ಸಾಯಂಕಾಲ ಅಲ್ಲ, ಕೊನೆಗೆ ರಾತ್ರಿ ಆದರೂ ಪರವಾಗಿಲ್ಲ ಅಂಕಲ್.. ಎಲ್ಲವನ್ನೂ ಮುಗಿಸಿಕೊಂಡೇ ಬೆಳಿಗ್ಗೆಯ ಫ್ಲೈಟ್ ಗೆ ನಾನು ಹೋಗುತ್ತೇನೆ” ಎಂದ ಆತ. ಅದನ್ನು ಕೇಳಿದ ಕರೋನ ಪೀಡಿತ ಅಪ್ಪ ಮಗನ ಅನುಕೂಲಕ್ಕಾಗಿ ಕೊನೆಗೊಮ್ಮೆ ಉಸಿರು ನಿಲ್ಲಿಸಿ ಗೋಣು ಚೆಲ್ಲಿದ!
ಶ್ವಾನ ಕೃತಜ್ಞತೆ
ಕರೋನ ಭಯದಿಂದ ಆತನ ಅಂತ್ಯಕ್ರಿಯೆಗೆ ಹೆಚ್ಚು ಜನ ಸೇರಲಿಲ್ಲ…
ಆದರೆ ಸ್ಮಶಾನ ತುಂಬಾ ಬರೀ ಬೀದಿ
ನಾಯಿಗಳು… ಲಾಕ್ ಡೌನ್ ಸಮಯದಲ್ಲಿ ಆತ ಅವುಗಳಿಗೆ
ಆಹಾರ ಹಾಕಿದ್ದ!
ಮೂಕ ಪ್ರೇಮ
ಒಂದು ವಾರದಿಂದ ಕರೋನ ಪೀಡಿತನಾಗಿ ಆಸ್ಪತ್ರೆ ಮಂಚದ
ಮೇಲಿದ್ದಾನೆ. ಯಾರಾದರೂ ತನ್ನವರು
ಬಂದು ಮಾತನಾಡಿಸಲಿ ಎಂದು
ಮನಸಿನ ಚಡಪಡಿಕೆ….
ಕೊನೆಗೂ ಯಾರೋ ಬಂದ ಶಬ್ದವಾಗಿ
ಕಣ್ಣು ತೆರೆದ… ಎದುರಿಗೆ ತಾನು ಸಾಕಿದ ನಾಯಿ!
******
4 thoughts on “ನ್ಯಾನೋ ( ಕರೋನ )ಕಥೆಗಳು”
ಇಡೀ ಕಥೆಯ ಸಾರವನ್ನು ನಾಲ್ಕೈದು ಸಾಲುಗಳಲ್ಲಿ ಹಿಡಿದಿಟ್ಟ ನಿಮ್ಮ ನ್ಯಾನೋ ಕಥೆಗಳು ಮಾರ್ಮಿಕವಾಗಿವೆ.
ಅಭಿನಂದನೆಗಳು.
ಧನ್ಯವಾದಗಳು
ಶ್ರೀ ರಾಘವೇಂದ್ರ ಮಂಗಳೂರು ಅವರು ನ್ಯಾನೋ ಕಥೆಗಳನ್ನು ಸೊಗಸಾಗಿ ಮತ್ತು ಮನ ಮುಟ್ಟುವಂತೆ ಬರೆಯುತ್ತಾರೆ. ಕರೋನ ಕಥೆಗಳು ಅದ್ಭುತವಾಗಿವೆ. ಅಭಿನಂದನೆಗಳು
ಧನ್ಯವಾದಗಳು 🙏