ಚಿಪ್ಪಿನೊಳಗಿನ ಸೂರು

ದೂರ ತೀರ ಸಾಗಬೇಕು 
ತಡೆಯೋ ತಟಿಯ ದಾಟಬೇಕು 
ಜೀವಜಾಲ ಒಲವಿನಾಳ  
ಕಳೆವ ಮೊದಲು ತಿಳಿಯಬೇಕು  
ಬದುಕಿನರ್ಥ ಓದಬೇಕು

ಒಪ್ಪು ತಪ್ಪು ನೀತಿ ನಿಯಮ 
ನಡೆದರಷ್ಟು ಹಾದಿ ಸುಗಮ 
ಆದರೇನು ಉಳಿದುಕೊಂಡ 
ಬೇಕು ಎನದೆ ಕಳಚಿಕೊಂಡ 
ಬದುಕಿನಾಟವೊಂದು ನಿಗಮ

ಕೆತ್ತಿ ಮೆತ್ತಿ ಇಟ್ಟ ಗೋಡೆ 
ಮುಪ್ಪು ಕರೆವವರೆಗೆ ಬೇಕೆ? 
ನಮ್ಮದೆಂದು ಇರುವ ನಂಟು 
ಚಿಪ್ಪಿನಂತೆ ಬಿಡದ ಅಂಟು
ಬಿಗಿಸಿಕೊಂಡ ಬಾಳು ಹಿತವೇ

ಪುಕ್ಕವಿಲ್ಲ ರೆಕ್ಕೆಯಿಲ್ಲ 
ಹಕ್ಕಿಯಾಗೋ ಆಸೆ ಸಹಜ 
ಹಾರಿ ದೂರದೂರು ಸೇರಿ 
ಬದುಕಿಗೊಂದು ಅರ್ಥ ಮೂಡಿ 
ಹೊಸತಿನಲ್ಲಿ  ಬೆರೆಯೊ ಮನುಜ

      -ಅನಿತಾ ಪಿ. ತಾಕೊಡೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

18 thoughts on “ಚಿಪ್ಪಿನೊಳಗಿನ ಸೂರು”

    1. Adv R. M. Bhandari

      ಚಿಪ್ಪಿನೋಳಿಗಿನ ಸೂರು – ಅನಿತರವರೆ ನಿಮ್ಮ ಕವನ ತುಂಬಾ ಒಳ್ಳೆಯದಾಗಿ ಮೂಡಿಬಂದಿದೆ. ಅಭಿನಂದನೆಗಳು 😊👍

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter