ನಾನು ಕೇಳುತ್ತೇನೆ ನೀವು ಹೇಗಿದ್ದೀರಿ? ನೀವು ಹೇಳುತ್ತೀರಿ ನೀನು ಹಾಗೇ ಇರು ಇರುವುದೆಂದರೇನು? ಪಂಜರದ ಹಕ್ಕಿ ಹಾರಲು ಮರೆತಿದೆ ಗೊಂದಲಕ್ಕೆ ಬಿದ್ದ ರೆಕ್ಕೆಗಳಿಗೆ ಹಾರಿ ಹೋಗೆಂದು ಬೆತ್ತ ತೋರಿಸುತ್ತೀರಿ ಅಲ್ಲೇ ಇದ್ದು ಇದ್ದೂ ಇರುವುದನ್ನೇ ನಂಬಿದ್ದ ಹಕ್ಕಿಗೆ ಇಲ್ಲಿ ಇರದೇ ಎಲ್ಲಾದರೂ ಹೋಗಿ ಬಿಡು ಎನ್ನುತ್ತೀರಿ ಹೋಗುವುದೆಂದರೇನು? ಅಡುಗೆ ಮಾಡಿದ ಅವ್ವ ಬಚ್ಚಿಡುವುದಿಲ್ಲ ಅನ್ನಸಾರಿನ ತಪ್ಪಲೆಗಳಿಗೆ ಯಾವ ಬೀಗಗಳೂ ಇಲ್ಲ ಕದ್ದು ಮೆದ್ದು ಕಿತ್ತುತಿಂದವರು ಎಲ್ಲರ ಅನ್ನವನ್ನು ಎಲ್ಲೆಲ್ಲೋ ಮುಚ್ಚಿ ಎತ್ತಿಟ್ಟಿದ್ದೀರಿ ಭಾಷಣದಲ್ಲಿ ಎಲ್ಲರಿಗೂ ಅನ್ನವಿದೆ ಎನ್ನುತ್ತೀರಿ ಕೊಬ್ಬು ಕರಗಿಸುವವರು ದಿವ್ಯ ಮೌನದಲ್ಲಿ ಸುಮ್ಮನಿರುತ್ತೀರಿ ಅಹಂಕಾರದಿ ಮೆರೆಯುತ್ತೀರಿ ಹೇಳಿ ಅನ್ನವೆಂದರೇನು? ರೋಗ ಮುಕ್ತರಾಗಲು ಬಯಸುತ್ತಿದ್ದ ಸರ್ವಜನರು ನಾಟಕ ರಂಗದಲ್ಲಿ ಕಲಿಯುತ್ತಿದ್ದಾರೆ ದೇಹ ಮಾತು ನಡೆ ನುಡಿಯನ್ನು ಸ್ವಯಂ ತಪಾಸಣೆ ಮಾಡಿಕೊಳ್ಳುತ್ತಿದ್ದಾರೆ ಹೀಗಿದ್ದೂ ಲೋಕ ವ್ಯಾಪಿಯಾದ ರೋಗವನ್ನು ಎಲ್ಲರೂ ಅವರವರೇ ವಿವರಿಸುತ್ತಿದ್ದಾರೆ ದೇಹದ ಮದ್ದು ಮನಸಿಗೆ ಮನಸಿನ ಮದ್ದು ದೇಹಕ್ಕೆ ರೋಗಿಗಳೇ ಕಂಡುಕೊಳ್ಳುತ್ತಿದ್ದಾರೆ ಈಗ ಭೂಲೋಕದ ನಾಟಕದ ತಾಲೀಮಿಗೆ ವೈದ್ಯರು ಬಂದಿದ್ದಾರೆ ನೀವೇ ಹೇಳಿ ರೋಗ ಮತ್ತು ಮದ್ದು ಎಂದರೇನು? ಕಾಯವೆಂಬ ಗೆಳಯ ಅಂತರಂಗವೆಂಬ ಗೆಳೆಯನೊಂದಿಗೆ ಸೇರಿ ಲೋಕ ನಾಟಕವನ್ನು ಬಾಳ ಚಿತ್ರವನ್ನು ಅಧಿಕಾರದ ಮಹಾ ಲೀಲೆಗಳನ್ನು ತದೇಕಚಿತ್ತದಿಂದ ನೋಡುತ್ತಿದ್ದಾರೆ ದಯವಿಟ್ಟು ಹೇಳಿ ನೋಟವೆಂದರೆ ಏನು? ದರ್ಶನ ಎಂದರೆ ಯಾವುದು? -ಡಾ. ಬೇಲೂರು ರಘುನಂದನ್
ದರ್ಶನ
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಬೇಲೂರು ರಘುನಂದನ್
ಬೇಲೂರುರಘುನಂದನ್
ಹುಟ್ಟಿದ್ದು ಹಾಸನ ಜಿಲ್ಲೆಯ ಬೇಲೂರಿನಲ್ಲಿ. ಪದವಿಯತನಕ ಬೇಲೂರಿನಲ್ಲಿ ಶಿಕ್ಷಣಪೂರೈಸಿ ಕನ್ನಡದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಮೈಸೂರು ವಿಶ್ವವಿದ್ಯಾಲಯದಕೇಂದ್ರವಾದ ಹಾಸನದ ಹೇಮಗಂಗೋತ್ರಿಯಲ್ಲಿರಾಷ್ಟ್ರಕವಿ ಕೆ.ವಿಪುಟ್ಟಪ್ಪಚಿನ್ನದ ಪದಕ, ಡಾ.ಚದುರಂಗ ಸುಬ್ರಮಣ್ಯರಾಜೇಅರಸ್ಚಿನ್ನದ ಪದಕ ಮತ್ತು ಶ್ರೀಮತಿ.ಎಚ್.ಎಲ್ ನಾಗರತ್ನಮ್ಮ ಶ್ರೀ ಲಕ್ಷ್ಮಣ ಶೆಟ್ಟಿಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ.ಪದವಿಪಡೆದಿದ್ದಾರೆ.ದೇಜಗೌಅವರ ಅನಲಾ ಮತ್ತುದುಷ್ಟಬುದ್ಧಿ ನಾಟಕಗಳು ಒಂದುಅಧ್ಯಯನ ಎಂಬವಿಷಯದಲ್ಲಿ ಎಂ.ಫಿಲ್ ಪದವಿಯನ್ನುಕನ್ನಡ ವಿಶ್ವವಿದ್ಯಾಲಯದಲ್ಲಿ ಪಡೆದು ಪ್ರಸ್ತುತಅದೇ ವಿಶ್ವ ವಿದ್ಯಾಲಯದಲ್ಲಿಕನ್ನಡರಂಗಭೂಮಿ ಮತ್ತು ಸಿನೆಮಾ : ವ್ಯಕ್ತಿ ನೆಲೆಯತಾತ್ವಿಕ ಚಿಂತನೆಗಳು ಎಂಬ ವಿಷಯದಲ್ಲಿ ಪಿಎಚ್.ಡಿಪದವಿಯನ್ನು ಪಡೆದಿದ್ದಾರೆ.
ಕಾಜಾಣದ ಮೂಲಕ ಅನೇಕ ಯುವ ಬರಹಗಾರರಜೊತೆಯಾಗುತ್ತಿದ್ದಾರೆ.ಬೇಲೂರಿನ ಗಮಕ ವಿದ್ವಾನ್ ಬಿ.ಕೆ.ವನಮಾಲಾಅವರ ಮಾರ್ಗದರ್ಶನದಲ್ಲಿ ಪಾರೀಣ (ಸೀನಿಯರ್) ಪ್ರಥಮದರ್ಜೆಯಲ್ಲಿ ಗಮಕ ಪರೀಕ್ಷೆಯಲ್ಲಿ ಉತ್ತೀರ್ಣ.2009 ರಲ್ಲಿಕರ್ನಾಟಕ ಸರ್ಕಾರದಕಾಲೇಜು ಶಿಕ್ಷಣ ಇಲಾಖೆಗೆ ಸಹಾಯಕ ಪ್ರಾಧ್ಯಾಪಕರಾಗಿ ನೇಮಕ. ಮೊದಲು ಹೊಸಕೋಟೆತಾಲೂಕಿನ ಸೂಲಿಬೆಲೆಯಲ್ಲಿಕರ್ತವ್ಯ ನಿರ್ವಹಿಸಿ ಸದ್ಯ ಬೆಂಗಳೂರಿನ ಸರ್ಕಾರಿ ಪ್ರಥಮದರ್ಜೆಕಾಲೇಜು, ವಿಜಯನಗರದಲ್ಲಿಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ. 2017 ರಲ್ಲಿಕರ್ನಾಟಕ ಸರ್ಕಾರಕರ್ನಾಟಕ ನಾಟಕಅಕಾಡೆಮಿಗೆ ಸದಸ್ಯನನ್ನಾಗಿ ನಾಮ ನಿರ್ದೇಶನ. ರಂಗಭೂಮಿ, ಸಂಗೀತ ಹಾಗೂ ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿ.
¨
All Posts
1 thought on “ದರ್ಶನ”
ತುಡಿತ ಚೆನ್ನಾಗಿದೆ