ಮೇಲಿನವನ ದೈವ

ಅವನು ಸಾಧಿಸಿದ ಸಾಗರೋಪಾದಿಯಲಿ
ಅವಳು ಸಾಧಿಸಲಿಲ್ಲ ಆಕಾಶದೆತ್ತರದಲಿ
ಚಿತ್ಕರಿಸಿತು ಜನ, ಎಲ್ಲ ನಸೀಬಿನಾಟ!
ಪ್ರಯತ್ನವೋ, ದೈವಲೀಲೆಯೋ

ಹಣೆ ಎತ್ತರವಿರೆ ದೈವ
ಕಣ್ಣು ದೊಡ್ಡದಿರೆ ಉತ್ತಮ ದೈವ
ಕೈ ರೇಖೆಗಳು ಸುದೈವ
ದೊಡ್ಡ ಕಿವಿಗಳು ಇನ್ನೂ ಚೆನ್ನ

ಹಾರ ಪೋಣಿಸಿ ಪ್ರಯತ್ನಗಳ
ಎವೆಯಿಕ್ಕದೇ ಮಾಡಿದ ಕೆಲಸ
ಒಂದೇ ಒಂದು ಅಂಶ
ದೈವದಲಿ ಮಂಡಿಯೂರಿದ ಅಚ್ಚರಿ

ಬೇಕು ಪರಿಪೂರ್ಣ ಪ್ರಯತ್ನಕ್ಕೂ
ಚಿನ್ನದ ಮುದ್ರೆ ಯಳ್ಳಷ್ಟಂಶದ ದೈವ    
ಶಿವನ ಹೊಳಪ ಹಣೆಲಿರುವ
ಶಕ್ತಿ ರೂಪ ಮೂರನೇ ಕಣ್ಣಂತೆ

ಪ್ರಯತ್ನ ದೈವಗಳ ನೀರ ಸುಳಿ ಸುಳಿಲಿ
ನಾಜೂಕು ತಂತಿಯ ಡೊಂಬರಾಟ
ನಡೆಸಿ, ಸಮತೋಲಿಸಿ ಶರೀರ
ಯಶ, ಅಪಯಶದ ಬುಟ್ಟಿ ಹೊತ್ತು

ಯಾರ ದೈವ, ಬಲ್ಲರು ಯಾರು
ಬಲು ರೋಚಕ, ದುರ್ಗಮ 
ಕೈಚೆಳಕ ದೇವರ ಕಮ್ಮಟ
ಹಕ್ಕಲ್ಲ, ಹುಲು ಮಾನವನದು

ಒಬ್ಬರದು ದೈವ ಒಂದೊಂದು
ಬರೆಯುವ ಸಿಂಹಾಸನಾರೂಢ 
ಮೇಲಿನವ ತನ್ನಿಚ್ಛೆಯಂತೆ, ಯಾರಿಗೊತ್ತು 
ಬರಿಯುವಾಗಿನ, ಮೇಲಿನವನ ದೈವ

  *ಮಾಲಾ.ಮ.ಅಕ್ಕಿಶೆಟ್ಟಿ.
           ಬೆಳಗಾವಿ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter