ಬಿದ್ದ ನವಿಲ ಗರಿಯ ಕೆಳಗಿರುವ

ಬಿದ್ದ ನವಿಲಗರಿಯ ಕೆಳಗಿರುವ ಇರುವೆಗೆ
ಮೇಲೆ ಗರಿ ಇರುವುದು ತಿಳಿಯದು
ಆ ಗರಿಯನ್ನು ಹೆಕ್ಕಲು ಧಾವಿಸುವ ಮಗುವಿಗೆ
ತನ್ನ ಪಾದದಡಿ ಇರುವೆ ಬಲಿಯಾಗುವುದು ಹೊಳೆಯದು

ಇರುವುವೆಲ್ಲವು ಹೀಗೆ ಎನ್ನುವಂತಿದೆ
ಆಕಾಶ ಹುಟ್ಟಿದಂದಿನಿಂದ ನೋಡುತ್ತ ನೆಲವ
ನೆಲವೊ ಆಕಾಶವನ್ನೆ ದಿಟ್ಟಿಸಿ ದಿಟ್ಟಿಸಿ ತನ್ನ ಕಣ್ಣಿನ
ಕಣ್ತನವ ಕಳೆದ ಹಾಗಿದೆ ಗಮನಿಸದೆ ಸ್ಥಿತ್ಯಂತರವ

ಆದರೆ ನನ್ನ ಮನೆ ಮುಂದೆ ಬೆಳೆದು ನಿಂತ ಮರವೊಂದು
ಎಲ್ಲ ಋತುಗಳಲ್ಲೂ ಋತುವಾಗಿಯೇ ಇದ್ದು
ನನ್ನೊಳಗೆ ಋತುಗಳನ್ನು ಕಳುಹಿಸುತ್ತಿರುತ್ತದೆ ನನ್ನ
ಮಗು ಮನಸಿಗೆ ಆಗಿ ಕಾಮನಬಿಲ್ಲು
                                         - ಡಾ.ನಾ.ಮೊಗಸಾಲೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಬಿದ್ದ ನವಿಲ ಗರಿಯ ಕೆಳಗಿರುವ”

  1. Raghavendra Mangalore

    ತುಂಬಾ ಅದ್ಭುತವಾದ ಕವಿತೆ. ನಿಜ..ಬಿದ್ದ ನವಿಲುಗರಿಯ ಕೆಳಗಿನಂತೆ ಎಲ್ಲರ ಬದುಕು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter